ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಬರ ನಿರ್ವಹಣೆ; ಮೇವಿನ ಕಿಟ್ ವಿತರಣೆ

ಜಿಲ್ಲೆಯಲ್ಲಿ 28,153 ಮೇವಿನ ಬೀಜದ ಮಿನಿ ಕಿಟ್‌ ವಿತರಣೆ
ಪೂರ್ಣಿಮಾ ಗೊಂದೆನಾಯ್ಕರ
Published 28 ನವೆಂಬರ್ 2023, 5:40 IST
Last Updated 28 ನವೆಂಬರ್ 2023, 5:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೇವಿನ ಕೊರತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ನೀರಾವರಿ ಸೌಲಭ್ಯವುಳ್ಳ ರೈತರಿಗೆ ಪಶು ಸಂಗೋಪನಾ ಇಲಾಖೆ ರಾಜ್ಯದಾದ್ಯಂತ ಮೇವಿನ ಬೀಜದ ಮಿನಿ ಕಿಟ್‌ ವಿತರಿಸುತ್ತಿದೆ.

ರೈತರೇ ಬೆಳೆದು ರೈತರಿಗೆ ನೆರವಾಗಲಿ ಎಂಬ ಸದುದ್ದೇಶದಿಂದ ಇಲಾಖೆ ಒಂದು ವಿನೂತನ ಯೋಜನೆ ಹಾಕಿಕೊಂಡಿದ್ದು, ಮಿನಿ ಕಿಟ್‌ ವಿತರಣೆ ಕಾರ್ಯ ಜಿಲ್ಲೆಯಲ್ಲಿ ಸಾಗಿದೆ.

ಮೆಕ್ಕೆಜೋಳ, ಮೇವಿನ ಜೋಳ, ಸಜ್ಜೆ ಮತ್ತು ಮೇವಿನ ಅಲಸಂಧಿ ಬೀಜದ ಕಿಟ್‌ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 28,153 ಮೇವಿನ ಬೀಜದ ಮಿನಿ ಕಿಟ್‌ ಈಗಾಗಲೇ ವಿತರಿಸಲಾಗಿದೆ. ಜಿಲ್ಲೆಯಲ್ಲಿ 3,050 ಮೇವಿನ ಬೀಜಗಳ ಮಿನಿ ಕಿಟ್‌ಗಳ ಹೆಚ್ಚುವರಿ ಬೇಡಿಕೆ ಇದೆ.

ಒಂದೊಂದು ತಳಿ ಕಿಟ್‌ಗೆ ಒಂದೊಂದು ದರ ನಿಗದಿ ಮಾಡಿದ್ದು, 1 ಕೆಜಿ, 3 ಕೆಜಿ, 5 ಕೆಜಿ ಹೀಗೆ ಕೆಜಿ ಲೆಕ್ಕದಲ್ಲಿ ಮಿನಿ ಕಿಟ್‌ ವಿತರಿಸಲಾಗುತ್ತಿದ್ದು, ಬರಗಾಲದಿಂದ ಈಗಾಗಲೇ ರೈತರು ಕಂಗಾಲಾಗಿದ್ದು ಇದರಿಂದ ಜಾನುವಾರುಗಳ ಮೇಲೆ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಈ ‌ಕಾರ್ಯ ಕೈಗೊಂಡಿದೆ.

ಈ ಮಿನಿ ಕಿಟ್‌ನಲ್ಲಿ ನಾಲ್ಕು ತಳಿಯ ಬೀಜ ಇರುತ್ತವೆ.  ಅದರಲ್ಲಿ ಮೆಕ್ಕೆಜೋಳ ಮೇವು, ಅಲಸಂಧೆ ಮೇವು, ಸಜ್ಜೆ, ಜೋಳದ ಮೇವಿನ ಕಿಟ್‌ ನೀಡಲಾಗುತ್ತಿದೆ. 10 ಗುಂಟೆ ಜಾಗದಲ್ಲಿ ಬಿತ್ತನೆ ಮಾಡಬಹುದು. ಹಸಿ ಮೇವು ಬೇಕು ಎನ್ನುವ ರೈತರು 30 ರಿಂದ 40 ದಿನ ಮೇವನ್ನು ಕಟಾವು ಮಾಡಬಹುದು. ಒಣ ಮೇವು ಬೇಕೆನ್ನುವ ರೈತರು 90 ದಿನ ನಂತರ ಕಟಾವು ಮಾಡಬಹುದು ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ರವಿ ಸಾಲಿಗೌಡರ ತಿಳಿಸಿದರು.

ಈಗಾಗಲೇ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಕಲಘಟಗಿ, ಅಣ್ಣಿಗೇರಿ, ಧಾರವಾಡ ಮತ್ತು ಅಳ್ನಾವರ ತಾಲ್ಲೂಕಿನಲ್ಲಿ ಮಿನಿ ಕಿಟ್‌ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

‘ಕಿರೆಸೂರು, ಹೆಬಸೂರು ಭಾಗಗಳಲ್ಲಿ ನೀರಿನ ಕೊರತೆಯಿಂದ ಸರ್ಕಾರ ಮಿನಿ ಕಿಟ್‌ ವಿತರಿಸುತ್ತಿದ್ದರೂ  ಯಾರು ತೆಗೆದುಕೊಳ್ಳುತ್ತಿಲ್ಲ. ಕಿಟ್‌ ಕೊಟ್ಟರು ನಮ್ಮ ಭಾಗಕ್ಕೆ ಉಪಯೋಗವಾಗುವುದಿಲ್ಲ. ಕಾರಣ ನೀರಿನ ಸೌಲಭ್ಯ ಕಲ್ಪಿಸಿದರೆ ಮೇವಿನ ಬೀಜ ಬಿತ್ತನೆ ಮಾಡಿ ನಮ್ಮ ಜಾನುವಾರುಗಳಿಗೂ ಮೇವು ಬೆಳೆಯಬಹುದು’ ಎಂದು ರೈತ ಮುಖಂಡ ಸುಭಾಷ ಅವ್ವಣವರ ತಿಳಿಸಿದರು.

ಮೇವಿನ ಬೀಜದ ಮಿನಿ ಕಿಟ್‌
ಮೇವಿನ ಬೀಜದ ಮಿನಿ ಕಿಟ್‌
ರೈತರು ಮೇವಿನ ಬೀಜದ ಮಿನಿ ಕಿಟ್‌ ಪಡೆಯಲು ಹತ್ತಿರದ ಪಶು ಸಂಗೋಪನಾ ಇಲಾಖೆ ಕಚೇರಿ ಭೇಟಿ ನೀಡಬಹುದು
ಡಾ.ರವಿ ಸಾಲಿಗೌಡರ ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ

ಬಾಕ್ಸ್‌ ಮೇವಿನ ಬೀಜ ಮಿನಿ ಕಿಟ್‌ ವಿವರತಾಲ್ಲೂಕಿನ ಹೆಸರು;ಹಂಚಿಕೆ;ಪೂರೈಕೆ;ಹೆಚ್ಚುವರಿ ಬೇಡಿಕೆಧಾಡವಾಡ&ಅಳ್ನಾವರ;7046;7046;1000ಹುಬ್ಬಳ್ಳಿ;0;6469;0ಕಲಘಟಗಿ;0;3408;1700ಕುಂದಗೋಳ;0;5598;350ನವಲಗುಂದ&ಅಣ್ಣಿಗೇರಿ;0;5632;0ಒಟ್ಟು;7046;28153;3050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT