ಸಾಂಸ್ಕೃತಿಕ ನಗರಿ ಧಾರವಾಡದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರಮುಖವಾದದ್ದು ಸಾಧನ ಕೇರಿ. ದ.ರಾ. ಬೇಂದ್ರೆಯವರು ಉಪಯೋಗಿಸಿದ ವಸ್ತುಗಳು, ಅವರಿಗೆ ವಿವಿಧ ಸಂಸ್ಥೆಗಳು ನೀಡಿದ್ದ ಕಾಣಿಕೆಗಳು, ಜ್ಞಾನಪೀಠ ಪುರಸ್ಕಾರದ ಫಲಕ, ಮೈಸೂರು ಪೇಟ, ಉಡುಪು, ಕನ್ನಡಕ, ಪುಸ್ತಕಗಳು ಸೇರಿ ಹಲವು ವಸ್ತುಗಳು ಪುಟ್ಟ ವಸ್ತು ಸಂಗ್ರಹಾಲಯದಂತಿರುವ ಬೇಂದ್ರೆ ನಿವಾಸದ ಆಕರ್ಷಣೆಗಳು. ಕುಪ್ಪಳಿಯಲ್ಲಿ ಕುವೆಂಪು ಅವರ ಮನೆಯನ್ನು ಅಭಿವೃದ್ಧಿಪಡಿಸಿರುವಂತೆ ಸಾಧನ ಕೇರಿ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಸಾಹಿತ್ಯಾಸಕ್ತರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.