ಕುಂದಗೋಳ: ಅತಿಯಾದ ಮುಂಗಾರು ಮಳೆಯಿಂದ ಬೆಳೆ ಕಳೆದುಕೊಂಡ ರೈತ ಇದೀಗ ಹಿಂಗಾರು ಬೆಳೆ ಮೇಲೆ ಆಶಾಭಾವ ಹೊಂದಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಶೇ 70ರಷ್ಟು ಹಿಂಗಾರು ಬಿತ್ತನೆ ಪೂರ್ಣವಾಗಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ, 18,800 ಹೆಕ್ಟೇರ್ ಕಡಲೆ, 1,800 ಹೆಕ್ಟೇರ್ ಗೋಧಿ, 4,520 ಹೆಕ್ಟೇರ್ ಜೋಳ, 800 ಹೆಕ್ಟೇರ್ ಕುಸುಬೆ ಬಿತ್ತನೆಯಾಗಿದೆ. ಈ ವರ್ಷ ಕಡಲೆ ಬಿತ್ತನೆ ಕ್ಷೇತ್ರ ಹೆಚ್ಚಳವಾಗಿದೆ.

ದೀಪಾವಳಿ ಹಬ್ಬದವರೆಗೂ ಸುರಿದ ಮಳೆಗೆ ಬಿತ್ತಿದ ಕಡಲೆ ಹಾಳಾಗಿ, ಬಹುತೇಕ ರೈತರು ಮತ್ತೆ ಖರ್ಚು ಮಾಡಿ ಕಡಲೆ ಮರು ಬಿತ್ತನೆ ಮಾಡಿದ್ದಾರೆ. ಹಿಂಗಾರು ಬೆಳೆ ಬಿತ್ತನೆ ತಡವಾಗಿದ್ದು ಫಸಲು ಬರುವ ಹೊತ್ತಿಗೆ ಮಳೆಗೆ ಬೆಳೆ ಸಿಗದಿರಲಿ ಎಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

‘ಮುಂಗಾರು ಎಲ್ಲಾ ಹೋಯಿತು, ಈಗ ಹಿಂಗಾರು ಬೆಳೆ ಬಂದ್ರ ದನಕರುಗಳಿಗೆ ಮೇವು, ನಮಗ ಉಣ್ಣಾಕ ಜೋಳ, ಗೋಧಿ ಆಕ್ಕಾವ್ರಿ. ಬೆಳೆ ಪರಿಹಾರ ಈಗ ಬಂದ್ರೆ ಅನುಕೂಲ’ ಎಂದರು ರೈತ ಬಸವರಾಜ ಹರವಿ.

‘ರೈತ ಸಮಾಜ’ದ ರಾಜ್ಯ ಅಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಅವರು, ‘ಈ ವರ್ಷ ರೈತರಿಗೆ ಎರಡೆರಡು ಪೆಟ್ಟು ಬಿದ್ದಿದೆ. ಮುಂಗಾರು ಬೆಳೆ ಬರಲಿಲ್ಲ. ಬಿತ್ತಿದ ಹಿಂಗಾರು ಬೀಜ ಹಾಳಾಗಿ ಮತ್ತೆ ಖರ್ಚು ಮಾಡಿ ಬಿತ್ತಬೇಕಾಯಿತು. ಆದರೆ ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದರಿಂದ ಈ ಭಾಗದಲ್ಲಿ ಕಡಲೆಗೆ ಸಿಡಿ ರೋಗ ಬರಬಹುದು. ಇದಕ್ಕೆ ಇಲಾಖೆಯವರು ರೈತರಿಗೆ ಮುನ್ನಚ್ಚರಿಕೆ ಮಾರ್ಗದರ್ಶನ ಕೊಡಬೇಕು’ ಎಂದರು.

ವಾಣಿಜ್ಯ ಬೆಳೆಗಳಾದ ಮೆಣಸಿನಕಾಯಿ, ಶೇಂಗಾ ಕೈಕೊಟ್ಟರೂ, ಹಿಂಗಾರು ಬೆಳೆಯಿಂದ ಹೊಟ್ಟೆಗೆ ಅನ್ನ ಸಿಗಲಿ ಎಂಬುದೇ ರೈತರ ನಿರೀಕ್ಷೆಯಾಗಿದೆ.

ಕಡಲೆ ಸೇರಿದಂತೆ ಎಲ್ಲ ಬೆಳೆಗಳ ಸಂರಕ್ಷಣೆ ಕುರಿತು ಯಾವುದೇ ಮಾಹಿತಿ ಬೇಕಿದ್ದರೂ ರೈತರು ನಮ್ಮ ಇಲಾಖೆ ಕಚೇರಿ ಸಂಪರ್ಕಿಸಿದರೆ ಅಗತ್ಯ ಮಾಹಿತಿ ನೀಡಲಾಗುವುದು
ಭಾರತಿ ಮೆಣಸಿನಕಾಯಿ ತಾಲ್ಲೂಕು ಕೃಷಿ ಸಹಾಯ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.