ಹುಬ್ಬಳ್ಳಿ: ನಗರದ ಹಳೇ ಕೋರ್ಟ್ ವೃತ್ತದ ಬಳಿ ಮೇಲ್ಸೇತುವೆ ಕಾಮಗಾರಿಯ ಕಬ್ಬಿಣದ ರಾಡ್ ಬಿದ್ದು ಎಎಸ್‌ಐ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಕಾಮಗಾರಿ ಗುತ್ತಿಗೆ ಪಡೆದ ಝಂಡು ಕಂಪನಿಯ ಮೂವರು ವ್ಯವಸ್ಥಾಪಕ ನಿರ್ದೇಶಕರು ಸೇರಿ 19 ಮಂದಿ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಪನಿಯ ನಿರ್ದೇಶಕರಾದ ರಾಮಕುಮಾರ, ಮೋಹಿತ್ ಮತ್ತು ಮನುದೀಪ್ ಹಾಗೂ ಯೋಜನಾ ವ್ಯವಸ್ಥಾಪಕ, ಎಂಜಿನಿಯರ್, ರಕ್ಷಣಾ ಅಧಿಕಾರಿ, ಕ್ರೇನ್ ಆಪರೇಟರ್, ಮಂದಿ ಕಾರ್ಮಿಕರು ಸೇರಿ ಇತರರ ವಿರುದ್ಧ ಎಎಸ್‌ಐ ಅವರ ಪುತ್ರ ವೃಷಭ ದಯಣ್ಣವರ ದೂರು ನೀಡಿದ್ದಾರೆ.

ಮೇಲ್ಸೇತುವೆ ಕಾಮಗಾರಿ ನಡೆಯುವ ಕೆಳಭಾಗದಲ್ಲಿ ಸಾರ್ವಜನಿಕರು, ವಾಹನಗಳ ಓಡಾಟಗಳು ಹೆಚ್ಚಿವೆ. ಹೀಗಿದ್ದಾಗಲೂ ಹಗಲಿನ ವೇಳೆ ಕಾಮಗಾರಿ ಕೈಗೊಳ್ಳಲಾಗಿದೆ. ಏನಾದರೂ ಅವಘಡ ಸಂಭವಿಸಬಹುದು ಎಂದು ತಿಳಿದಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ನಿಷ್ಕಾಳಜಿ ವಹಿಸಿದ್ದರಿಂದ ಎಎಸ್‌ಐ ಅವರ ತಲೆ ಮೇಲೆ ಕಬ್ಬಿಣದ ರಾಡ್ ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.