ಹುಬ್ಬಳ್ಳಿ: 'ನೇಹಾ ಕೊಲೆ ಪ್ರಕರಣದ ಆರೋಪಿ ಫಯಾಜ್ ಸಿಐಡಿ ತನಿಖೆಯಿಂದ ನಿರ್ದೋಷಿ ಎಂದು ಸಾಬೀತಾಗಿ ಹೊರಗೆ ಬಂದರೆ, ಅವನಿಗೆ ನಾವೇ ತಕ್ಕ ಶಿಕ್ಷೆ ಕೊಡುತ್ತೇವೆ' ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.

ನಗರದ ಬಿಡ್ನಾಳದ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ತಂದೆ-ತಾಯಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

'ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿರುವುದು ಸ್ವಾಗತಾರ್ಹ. ಆದರೆ, ರಾಜ್ಯ ಸರ್ಕಾರ ಒತ್ತಡ ಹೇರಿ ತನಿಖೆಯ ದಿಕ್ಕು ತಪ್ಪಿಸಿದರೆ ಅದಕ್ಕೆ ತಕ್ಕ ಪಾಠ ಅನುಭವಿಸಬೇಕಾಗುತ್ತದೆ. ನಿರ್ದೋಷಿಯಾಗಿ ಫಯಾಜ್ ಹೊರಗೆ ಬಂದರೆ, ನಾವೇ ಶಿಕ್ಷೆ ವಿಧಿಸಿ ಜೈಲಿಗೆ ಹೋಗಲು ಸಿದ್ಧರಿದ್ದೇವೆ' ಎಂದು ಹೇಳಿದರು.

'ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ. ಆದರೆ, ರಾಜಕೀಯ ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳನ್ನು ದಾರಿತಪ್ಪಿಸುತ್ತಾರೆ. ಅವರ ಕೈಕಟ್ಟದೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ವೋಟ್ ಬ್ಯಾಂಕ್, ಮುಸ್ಲಿಮ್ ಓಲೈಕೆಗಳನ್ನು ಬಿಡಬೇಕು. ನೇಹಾಳನ್ನು ವ್ಯವಸ್ಥಿತವಾಗಿ ಕೊಲೆ ಮಾಡಿದ ಪ್ರಕರಣವಾಗಿದ್ದು, ಅನಗತ್ಯವಾಗಿ ತನಿಖೆ ವಿಳಂಬ ಮಾಡದೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು' ಎಂದು ಆಗ್ರಹಿಸಿದರು.

'ರಾಜ್ಯದಲ್ಲಿ ಲವ್ ಜಿಹಾದ್ ಆಳವಾಗಿ ಬೇರೂರಿದ್ದು, ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಿವೆ. ಜಿಹಾದಿ ಮನಸ್ಥಿತಿಯವರಿಗೆ ಭಯವೇ ಇಲ್ಲದಂತಾಗಿದೆ. ನೇಹಾಗೆ 13 ಬಾರಿ ಚಾಕು ಇರಿದು ಕೊಲೆ ಮಾಡಲಾಗಿದೆ. ಆರೋಪಿ ಫಯಾಜ್‌ಗೆ ಸೂಕ್ತ ತರಬೇತಿ ನೀಡಿರುವ ಸಂಶಯವಿದ್ದು, ಸಿಐಡಿ ಅಧಿಕಾರಿಗಳು ಈ ಕುರಿತು ಆಳವಾದ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದರು.

'ನೇಹಾ ಕೊಲೆ ಪ್ರಕರಣ ಕಾಂಗ್ರೆಸ್‌ಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿದೆ ಎಂದು, ಅದನ್ನು ಸರಿಪಡಿಸಲು ಮುಸ್ಲಿಮ್ ಸಮುದಾಯದವರಿಂದ ಸಾಂತ್ವನ, ಪ್ರತಿಭಟನೆ ಮಾಡಿಸಲಾಗುತ್ತಿದೆ. ಅಂಜುಮನ್ ಸಂಸ್ಥೆಯವರಿಗೆ ಅಷ್ಟೊಂದು ಕಳಕಳಿಯಿದ್ದರೆ, ಫಯಾಜ್ ಕುಟುಂಬಕ್ಕೆ ಬಹಿಷ್ಕಾರ ಹಾಕಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ, ಹಿಂದೂ ಹುಡುಗಿಯರನ್ನು ಪ್ರೀತಿಸಿದರೆ ಬಹಿಷ್ಕಾರ ಹಾಕುತ್ತೇವೆ, ಲವ್ ಜಿಹಾದ್ ನಡೆಸಿದರೆ ಸ್ಮಶಾನದಲ್ಲಿ ಜಾಗ ನೀಡುವುದಿಲ್ಲ, ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಫತ್ವಾ ಹೊರಡಿಸಲಿ. ಅದನ್ನು ಬಿಟ್ಟು ನಾಟಕ ಮಾಡುವುದು ಬೇಡ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ತಂಡ ರಚನೆ

'ಲವ್ ಜಿಹಾದ್ ನಿಯಂತ್ರಿಸಲು ಶ್ರೀರಾಮ ಸೇನೆ ವಿಶೇಷ ತಂಡ ರಚಿಸಿ, ಪ್ರತಿಯೊಂದು ಕಾಲೇಜಿನ ಕ್ಲಾಸ್ ರೂಮ್‌ನಲ್ಲಿ ತಂಡದ ಸದಸ್ಯರು ಇರುವಂತೆ ಮಾಡಲಿದೆ. ಯಾರಾರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎನ್ನುವುದನ್ನು ತಂಡ ಗಮನಿಸಲಿದೆ. ಒಂದು ವಾರದಲ್ಲಿ ಸಹಾಯವಾಣಿ ಆರಂಭಿಸಿ, ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಲಿದೆ. ಮಹಿಳೆಯರಿಗೆ ವಿಶೇಷ ತರಬೇತಿಯನ್ನು ಸಹ ನೀಡಲಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.