ಹುಬ್ಬಳ್ಳಿ: ಮುಟ್ಟು ನೈಸರ್ಗಿಕ ಪ್ರಕ್ರಿಯೆ ಮತ್ತು ಸಹಜ. ಈ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯ. ಆದರೆ, ಬಹುತೇಕರು ಜಾಗೃತಿ ಕೊರತೆಯಿಂದ ಅದರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಎಲ್ಲರಿಗೂ ಇದರ ಬಗ್ಗೆ ಅರಿವು ಮೂಡಿಸಲೆಂದೇ ಸರ್ಕಾರಿ ಉದ್ಯೋಗ ತ್ಯಜಿಸಿ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ಗಂಗಮ್ಮ ಮೋದಿ ನಿರತರಾಗಿದ್ದಾರೆ.

ನವಲಗುಂದ ನಿವಾಸಿ, ಪ್ರಸ್ತುತ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಇರುವ ಗಂಗಮ್ಮ, ಬಿಎಸ್ಸಿ ಪದವೀಧರೆ. 2020ರಲ್ಲಿ ವಾರ್ಡರ್ ಆಗಿ ಆಯ್ಕೆಯಾದ ಅವರು ಅಲ್ಲಿಂದಲೇ ಮುಟ್ಟಿನ ಕಪ್ ಬಳಕೆ ಬಗ್ಗೆ ಜಾಗೃತಿ ಮೂಡಿಸತೊಡಗಿದರು. ಸ್ಯಾನಿಟರಿ ನ್ಯಾಪಕಿನ್ ಬಳಕೆ ಹೆಣ್ಣುಮಕ್ಕಳ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಕರ ಎಂದು ಅವರು ಅರಿತರು. ಇದರ ಬಗ್ಗೆ ಜಾಗೃತಿ ಮೂಡಿಸಲೆಂದೇ ಅವರು ಪಣತೊಟ್ಟರು. ಅದಕ್ಕಾಗಿ ಕೆಲಸಕ್ಕೂ ರಾಜೀನಾಮೆ ನೀಡಿದರು.

2020ರಿಂದ ಶಾಲಾ- ಕಾಲೇಜು, ಮಹಿಳಾ ಕ್ಲಬ್ ಹಾಗೂ ಎನ್‍ಜಿಒ ನಡೆಸುವ ಕಾರ್ಯಕ್ರಮಗಳಲ್ಲಿ ಮತ್ತು ಆನ್‍ಲೈನ್ ಮೂಲಕ ಮುಟ್ಟಿನ ಕಪ್ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲವರಿಗೆ ಮುಟ್ಟಿನ ಕಪ್‍ಗಳನ್ನು ಉಚಿತವಾಗಿ ನೀಡಿ, ಪ್ರೋತ್ಸಾಹಿಸುತ್ತಿದ್ದಾರೆ. ಸ್ಯಾನಿಟರಿ ನ್ಯಾಪ್‍ಕಿನ್‍ಗಳಲ್ಲಿ ಪ್ಲಾಸ್ಟಿಕ್ ಅಂಶವಿದ್ದು, ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನ್ಯಾಪ್‍ಕಿನ್‍ಗಳನ್ನು ನಾಶ (ಡಿಸ್‌ಪೋಸ್) ಮಾಡುವುದು ಕಷ್ಟ. ಪರಿಸರಕ್ಕೂ ಹಾನಿಕರ ಎಂಬುದು ಅವರ ಅಭಿಪ್ರಾಯ.

‘ಬಟ್ಟೆ ನ್ಯಾಪ್‍ಕಿನ್ ಅಥವಾ ಮುಟ್ಟಿನ ಕಪ್ ಬಳಕೆ ಹೆಚ್ಚು ಸೂಕ್ತ. ಇವುಗಳ ಬೆಲೆ ಜಾಸ್ತಿ ಎಂಬ ಕಾರಣಕ್ಕೆ ಬಳಸದಿರುವವರು ಇದ್ದಾರೆ. ಆದರೆ ಪ್ರತಿ ತಿಂಗಳು ಸ್ಯಾನಿಟರಿ ನ್ಯಾಪ್‍ಕಿನ್‍ಗಳಿಗೆ ₹ 100 ಖರ್ಚು ಮಾಡುತ್ತಾರೆ. ಆದರೆ ಬಟ್ಟೆ ನ್ಯಾಪ್‍ಕಿನ್‍ಗಳ ಬೆಲೆ ತುಸು ಜಾತಿ ಆದರೂ ಅವುಗಳನ್ನು ಮೂರ್ನಾಲ್ಕು ವರ್ಷ ಬಳಸಬಹುದು. ಮುಟ್ಟಿನ ಕಪ್ ₹200 ರಿಂದ ₹2,000ರವೆಗೆ ಲಭ್ಯ ಇವೆ. ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ಸಾಧ್ಯವಾದಷ್ಟು ಪಾರದರ್ಶಕ ಕಪ್ ಬಳಕೆ ಹೆಚ್ಚು ಸೂಕ್ತ’ ಎನ್ನುತ್ತಾರೆ ಗಂಗಮ್ಮ.

ಶಾಲಾ-ಕಾಲೇಜು ಮಕ್ಕಳಿಗೆ ಈ ಬಗ್ಗೆ ತಿಳಿಸುವುದರಿಂದ ಅವರು ಇನ್ನೊಬ್ಬರಿಗೆ ತಿಳಿಸುತ್ತಾರೆ. ಹೆಣ್ಣುಮಕ್ಕಳ ಆರೋಗ್ಯ ಹಾಗೂ ಪರಿಸರ ಕಾಪಾಡಬಹುದು ಎನ್ನುವುದು ಗಂಗಮ್ಮ ಅವರ ಉದ್ದೇಶ. ಮಹಿಳಾ ಕ್ಲಬ್, ಎನ್‍ಜಿಒ ಸಂಪರ್ಕಿಸಿದರೆ ಜಾಗೃತಿ ನೀಡಲು ಅವರು ಸಿದ್ಧರಿದ್ದಾರೆ. ಗಂಗಮ್ಮ ಅವರ ದೂರವಾಣಿ ಸಂಖ್ಯೆ: 9483741096.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.