ಹುಬ್ಬಳ್ಳಿ: ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ಗೋಡ್ಸೆ ಅವರನ್ನು ವೈಭವೀಕರಿಸುವುದನ್ನು ನಾನು ಒಪ್ಪಲ್ಲ ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

'ಜನ ಗಣ ಮನ' ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡ ಅವರು ಇಲ್ಲಿನ ಮೂರು ಸಾವಿರ ಮಠಕ್ಕೆ ಬುಧವಾರ ಆಗಮಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಗೋಡ್ಸೆ ಅವರನ್ನು ಸಂಭ್ರಮಿಸಲು ಬೇರೆ ವಿಚಾರಗಳಲ್ಲಿ ಸಂಭ್ರಮಿಸಬಹುದು. ಮುಖ್ಯವಾಗಿ ಭಾರತ ಹಾಗೂ ಹಿಂದೂ ಧರ್ಮದ ಕುರಿತು ಅವರಿಗೆ ಇದ್ದ ಆಲೋಚನೆಗಳನ್ನು ಸಂಭ್ರಮಿಸಬಹುದು ಎಂದರು.

ತಲವಾರ ಹಿಡಿದುಕೊಂಡು ಟಿಪ್ಪು ಸುಲ್ತಾನ್, ಔರಂಗಜೇಬನ ಫೋಟೊ ಹಾಕಿಕೊಂಡು ಮೆರೆಯುತ್ತಿರುವವರನ್ನು ಸಮರ್ಥಿಸುವ ಸರ್ಕಾರದ ಕೃತ್ಯ ಸಾವಿರ ಪಟ್ಟು ನೀಚ ಕೃತ್ಯ ಎಂದು ಟೀಕಿಸಿದರು.

'ಔರಂಗಜೇಬ ಒಬ್ಬ ರಾಕ್ಷಸ. ಅವನನ್ನು ಸಂಭ್ರಮಿಸಲು ಅನುವು ಮಾಡಿಕೊಡುವ ಸರ್ಕಾರ, ಇಡೀ ಸಮಾಜವನ್ನು ಇಬ್ಭಾಗ ಮಾಡಲು ಹೊರಟಿದೆ ಎಂದೇ ಅರ್ಥ' ಎಂದು ಟೀಕಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.