ಧಾರವಾಡ: ‘ಮಧ್ಯಯುಗದ ಇಂಗ್ಲೆಂಡ್ ದೇಶವನ್ನು ಆಧುನಿಕ ವಿಚಾರಧಾರೆಗೆ ತಂದ ನಾಟಕಕಾರ ವಿಲಿಯಂ ಷೆೇಕ್ಸ್‌ಪಿಯರ್. ಅವನು ಇಂದಿಗೂ ಜಗತ್ತಿನ ಎಲ್ಲ ಭಾಷೆಗಳಲ್ಲಿ ಜೀವಂತವಾಗಿ ಉಳಿದಿದ್ದಾನೆ’ ಎಂದು ಹಿರಿಯ ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು.

ಇಲ್ಲಿನ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಟಕ-, ಸಿನಿಮಾಗಳಲ್ಲಿ ಷೆೇಕ್ಸ್‌ಪಿಯರ್ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಷೆೇಕ್ಸ್‌ಪಿಯರ್‌ನ ವಿನೋದ ಪ್ರವೃತ್ತಿ ಆತನ ಪ್ರಜ್ಞೆಯ ಭಾಗವೇ ಆಗಿತ್ತು. ನಗಿಸಿ, ನಗುತ್ತ ಜಗತ್ತಿನ ನಡೆ-ನುಡಿಗಳ ಹಿರಿಮೆ-, ಕಿರಿಮೆಗಳನ್ನು ನಮಗೆ ತೊರಿಸಬಲ್ಲ ನಾಟ್ಯ ಪ್ರಜ್ಞೆ ಅವನದು. ಅದರಿಂದ ದಾರ್ಶನಿಕ ಅನುಭವ ಪ್ರೇಕ್ಷಕರಿಗೆ ಆತ ಕೊಟ್ಟಿದ್ದಾನೆ. ಜ್ಯುಲಿಯಸ್ ಸೀಸರ್, ಮಾರ್ಕ್ ಆಂಟನಿ, ಮ್ಯಾಕ್‌ಬೆತ್ ಇವು ಷೆೇಕ್ಸ್‌ಪಿಯರ್‌ನ ಮಹಾಪಾತ್ರಗಳು. ಜನ ಸಾಮಾನ್ಯರಿಗೆ ಬೇಕಾದದ್ದು, ಈ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮುತ್ಸದ್ದಿಗಳೇ ವಿನಹ, ದುರಂತಕ್ಕೆ ತಳ್ಳುವ, ಆತ್ಮಹತ್ಯಾ ಪ್ರವೃತ್ತಿಯ ರಾಜಕಾರಣಿಗಳಲ್ಲ ಎಂಬುದನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದ ಶೇಕ್ಸ್‌ಪಿಯರ್‌ನ ರೀತಿ ಅಪೂರ್ವ, ಅನುಪಮ ಸಾಧನೆ’ ಎಂದರು.

ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ರಂಗಾಯಣ ಆಡಳಿತಾಧಿಕಾರಿ ಕೆ.ಎಚ್.ಚನ್ನೂರ ಸ್ವಾಗತಿಸಿದರು. ನಿರ್ದೇಶಕ ಪ್ರಕಾಶ ಗರುಡ ವಿಚಾರ ಸಂಕಿರಣ ನಡೆಸಿಕೊಟ್ಟರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ.ಶ್ಯಾಮಸುಂದರ ಬಿದರಕುಂದಿ, ಶ್ಯಾಮಲಾ ಗುರುಪ್ರಸಾದ, ಸಿದ್ಧಲಿಂಗ ಪಟ್ಟಣಶೆಟ್ಟಿ, ವಿಷಯಾ ಜೇವೂರ, ವಿಜಯಾ ಗುತ್ತಲ, ಮಹಾದೇವ ಹಡಪದ, ಶಶಿಧರ ನರೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.