ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಈ ವರ್ಷ 32348 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಮುಂಗಾರು ಬೆಳೆ ನಾಶವಾಗಿದೆ. ಅಲ್ಲದೆ ಮಳೆ ಇಲ್ಲದ ಕಾರಣ ಹಿಂಗಾರು ಸರಿಯಾಗಿ ಬಿತ್ತನೆಯಾಗಿಲ್ಲ.
ರೇವಣೆಪ್ಪ ಮನಗೂಳಿ, ಸಹಾಯಕ ಕೃಷಿ ನಿರ್ದೇಶಕ
ಪ್ರಸ್ತುತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಶೇ 80ರಷ್ಟು ತೊಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಕುಸಿಯುವ ಭೀತಿ ಇದ್ದು ಇನ್ನೂ ತೋಟಗಾರಿಕೆಗೆ ಹೊಡೆತ ಬೀಳುವ ನಿರೀಕ್ಷೆ ಇದೆ.
ಸುರೇಶ ಕುಂಬಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ
ಈ ವರ್ಷ ಮುಂಗಾರು ಮತ್ತು ಹಿಂಗಾರು ಬೆಳೆಗಳು ಹಾಳಾಗಿದ್ದು ಸಾಲಸೋಲ ಮಾಡಿ ಬಿತ್ತಿದ್ದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು