ರಜೆ ಮೇಲೆ ಊರಿಗೆ ಹೋಗಿದ್ದ ನನಗೆ ಆಸ್ಪತ್ರೆ ಮುಖ್ಯಸ್ಥರಿಂದ ಕರೆಬಂತು.‘ಕೋವಿಡ್–19 ರೋಗಿಗಳ ಚಿಕಿತ್ಸೆಗೆ ನಿಮ್ಮ ಸೇವೆಯ ಅಗತ್ಯವಿದೆ. ತಕ್ಷಣವೇ ಕೆಲಸಕ್ಕೆ ಹಿಂದಿರುಗಬೇಕು’ ಎಂದರು.

ಆಗ, ಸೇವೆಗೆ ಹೋಗುವ ಅಥವಾ ಹೋಗದೇ ಇರುವ ಆಯ್ಕೆಗಳು ನನ್ನ ಮುಂದಿದ್ದವು. ಹೋಗಿದ್ದರೆ ವೈದ್ಯಕೀಯವನ್ನು ಇಷ್ಟಪಟ್ಟು ಓದಿದ್ಕಕ್ಕೆ ಅರ್ಥವೇನು? ಹೀಗಾಗಿ ‘ಬರುತ್ತೇನೆ’ ಎಂದು ಹೇಳಿದೆ. ಇಲ್ಲಿಯವರೆಗೂ ಕೋವಿಡ್–19 ರೋಗಿಗಳ ಆರೈಕೆಯಲ್ಲಿ ತೊಡಗಿದ್ದೇನೆ.

ಆರಂಭದ ದಿನಗಳಲ್ಲಿ ಸೀಮಿತ ಸೌಲಭ್ಯಗಳಲ್ಲೇ ಗರಿಷ್ಠ ಸೇವೆ ಒದಗಿಸಬೇಕಿತ್ತು. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಸರ್ಕಾರ ವೈದ್ಯರಿಗೆ ಸೌಲಭ್ಯಗಳನ್ನು ಹೆಚ್ಚಿಸಿತು.

ಸೋಂಕು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಗಂಡನನ್ನು ತಿಂಗಳಾನುಗಟ್ಟಲೇ ಭೇಟಿ ಮಾಡದಿರುವುದು ಕಷ್ಟವೆನಿಸಿತು. ರೋಗಿಗಳನ್ನು ಸಂಭಾಳಿಸುವುದರ ಜತೆಗೆ ಮನೆಯವರಿಗೂ ಧೈರ್ಯ ತುಂಬಬೇಕಿತ್ತು. ಎರಡೂ ಕಡೆ ಸಮತೋಲನದಿಂದ ಕಾರ್ಯನಿರ್ವಹಿಸಿದೆ.

ಪತಿ ಡಾ.ಬಸವರಾಜ ಏಣಗಿ ಧೈರ್ಯ ತುಂಬಿದರು. ಕುಟುಂಬಕ್ಕಿಂತಲೂ ಕರ್ತವ್ಯವೇ ಮುಖ್ಯ ಎಂದು ಹುರಿದುಂಬಿಸಿದರು.

–ಡಾ.ಸ್ನೇಹಾ ಪಾಟೀಲ, ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.