ಲಾಕ್ಡೌನ್ ಘೋಷಣೆ ನಂತರ ಬಹಳಷ್ಟು ಜನ ನಿರ್ಗತಿಕರಾಗಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಉದ್ಭವಿಸಿತ್ತು. ಪೊಲೀಸ್, ಕಂದಾಯ, ಪುರಸಭೆ, ಆರೋಗ್ಯ ಇಲಾಖೆಗಳ ನೌಕರರು ಊಟ, ನಿದ್ರೆ ಮರೆತು ಕರ್ತವ್ಯದಲ್ಲಿ ನಿರತರಾಗಿದ್ದರು. ಅವರಿಗೆ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಚಹಾ ಸಹಿತ ಸಿಗದ ಪರಿಸ್ಥಿತಿ ಇದ್ದಾಗ, ಊಟ, ಉಪಾಹಾರ ಮತ್ತು ಚಹಾ ವಿತರಿಸುವ ಕೆಲಸ ಕೈಗೊಂಡೆವು.

ಅಭಿಷೇಕ ಡೊಂಬರ, ಶಿವರಾಜ ಅಂಕಲಕೋಟಿ, ವೀರೇಶ ಹಿರೇಮಠ, ಅಭಿಷೇಕ ಕುಲಕರ್ಣಿ, ವಿನಯ ಅಂಕಲಕೋಟಿ, ದರ್ಪಣ ಜೈನ್ ಸೇರಿದಂತೆ 21ಜನರಿದ್ದೇವೆ.

ಸಮಾಜ ಸೇವೆಯ ಉದ್ದೇಶದಿಂದಲೇ ಒಂದಾದ ಯುವಕರು ಸ್ವಂತ ಹಣದಿಂದ ಊಟ ಸಿದ್ಧಪಡಿಸಿ ಎರಡು ತಿಂಗಳವರೆಗೆ ವಿತರಿಸಿದೆವು. ಪದಾಧಿಕಾರಿಗಳು ಎಂಜಿನಿಯರ್ ಆಗಿದ್ದು ಒಂದು ತಿಂಗಳ ಸಂಬಳವನ್ನು ಈ ಕೆಲಸಕ್ಕಾಗಿ ತೆಗೆದಿಟ್ಟರು. 50 ಜನರಿಗೆಂದುಕೊಂಡಿದ್ದು, 550ರವರೆಗೆ ಏರಿತು. ದಿನಕ್ಕೆ ₹13 ಸಾವಿರ ಖರ್ಚು ಬರುತ್ತಿತ್ತು.

ಇವರ ಸೇವೆಯನ್ನು ಗಮನಿಸಿದ ಬಜಾರ ವ್ಯಾಪಾರಸ್ಥರ ಸಂಘ ಮತ್ತು ಎಪಿಎಂಸಿ ವರ್ತಕರ ಸಂಘದವರು ಕಿರಾಣಿ ಸಾಮಾನುಗಳನ್ನು ಕೊಡಿಸಲು ಮುಂದಾದರು. 45 ದಿನಗಳವರೆಗೆ ಸಂಸ್ಥೆ ಹಸಿದವರಿಗೆ ಊಟ ಬಡಿಸಿದೆ. ಮೂಕ ಪ್ರಾಣಿ ನಾಯಿಗಳಿಗೂ ಸಹ ಅನ್ನ ನೀಡಿದೆವು. ಹಸಿವಿನಿಂದ ಸಾಯಬಾರದೆಂಬ ಉದ್ದೇಶ ಈಡೇರಿದ ತೃಪ್ತಿ ಇದೆ.

–ಚಂದ್ರ ಬಂಡಿವಾಡ,ಅಧ್ಯಕ್ಷರು ‘ಕರ್ಣ ದೈವ ಕುಟುಂಬಕಂ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.