ಕಾಗೇದಹಳ್ಳಕ್ಕೆ ಸೇತುವೆ ನಿರ್ಮಿಸಲು ಅಂದಾಜು ಸಿದ್ದವಾಗಿದೆ. ಕಾಮಗಾರಿಗೆ ಮಳೆ ಬಿಡುವು ಕೊಡುತ್ತಿಲ್ಲ. ಗುತ್ತಿಗೆದಾರರಿಗೆ ಅನಾರೋಗ್ಯ ಆಗಿರುವುದರಿಂದ ಕಾಮಗಾರಿ ತಡವಾಗಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಕೈಗೊಳ್ಳುತ್ತೇವೆ.
-ಈರಯ್ಯ, ಎತ್ತಿನಹೊಳೆ ಯೋಜನೆ ಎಂಜಿನಿಯರ್
ಈ ವರ್ಷ ಭಾರಿ ಪ್ರಮಾಣದ ಮಳೆ ಸುರಿದಿರುವುದರಿಂದ ಹಳ್ಳ ನಿರಂತರವಾಗಿ ಹರಿಯುತ್ತಿದೆ. ಇದು ನಿತ್ಯದ ಸಮಸ್ಯೆ ಆಗಿರುವುದರಿಂದ ಎತ್ತಿನಹೊಳೆ ಯೋಜನೆಯವರು ಬೇಗ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.