ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರ

ಶಾಸಕ ಬಸವರಾಜ ಬೊಮ್ಮಾಯಿ ಭರವಸೆ
Published 20 ಜನವರಿ 2024, 16:21 IST
Last Updated 20 ಜನವರಿ 2024, 16:21 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಜನಿಸಿದವರಿಗೆ ಮರಣ ಎಂದಿಗೂ ತಪ್ಪಿದ್ದಲ್ಲ. ಹೀಗಾಗಿ ಅಪಘಾತದಲ್ಲಿ ನರಳುತ್ತಿರುವ ಜನರಿಗೆ ನೆರವಾಗುವ ಪುಣ್ಯ ರಕ್ತದಾನದಿಂದ ಬರುತ್ತಿದೆ. ಹೀಗಾಗಿ ರಕ್ತದಾನ ಎಂಬುವುದು ಇತರರಿಗೆ ಸಂಜೀವಿನಿಯ ಸಂಕೇತ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಶಾಸಕ ಬಸವರಾಜ ಬೊಮ್ಮಾಯಿ ಅವರ 64ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ರಕ್ತ ಕೇಂದ್ರದಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ಷಣಿಕ ಆಸೆಗಳನ್ನು ಬಿಟ್ಟು ಶಾಶ್ವತವಾದ ಕಾರ್ಯಗಳು ಮನುಷ್ಯನ ಬದುಕಿನ ಮೌಲ್ಯ ಹೆಚ್ಚಿಸುತ್ತವೆ. ಅಂತಹ ಕಾರ್ಯಗಳ ಕುರತು ಚಿಂತನೆ ನಮ್ಮದಾಗಬೇಕು’ ಎಂದರು.

‘ಗ್ರಾಮೀಣ ಜನರು ವಿವಿಧ ರೋಗರುಜಿನಗಳಿಂದ ನರಳುತ್ತಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಮತ್ತು ಕ್ಷೇತ್ರದ ಜನ ಆರೋಗ್ಯದಿಂದ ಇರಲು ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಕೊರತೆ ಇರುವ ರಕ್ತ ಕೇಂದ್ರದ ಆಸ್ಪತ್ರೆಗಳಿಗೆ ರಕ್ತ ಸಿಗುವಂತೆ ಮಾಡಲಾಗುವುದು. ಅಲ್ಲದೇ ಟ್ರಸ್ಟ್ ವತಿಯಿಂದ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಸನ್ಮಾನ, ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಪ್ರಧಾನಿ ಮೋದಿ ಅವರ ಮಹತ್ವದ ಯೋಜನೆಯಾದ ಆಯುಷ್ಮಾನ ಭಾರತ್ ಯೋಜನೆಯಲ್ಲಿ 70 ಲಕ್ಷ ಜನರು ಲಾಭ ಪಡೆದಿದ್ದಾರೆ. ರಾಜ್ಯದಲ್ಲಿ 10ಸಾವಿರ ಕೋಟಿ ಕಿಸಾನ್‌ ಸಮ್ಮಾನ ಯೋಜನೆ ರೈತರಿಗೆ ಲಾಭ ತಂದಿದೆ. ಹೀಗಾಗಿ ಕೇಂದ್ರ ಸರ್ಕಾರದ ಆರೋಗ್ಯಪರ ಮತ್ತು ಅಭಿವೃದ್ಧಿಪರ ಯೋಜನೆಗಳು ಜನಮನಕ್ಕೆ ತಲುಪಿವೆ’ ಎಂದರು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಡಿ.ಎಸ್.ಮಾಳಗಿ, ಗಂಗಣ್ಣ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ರವಿ ಕುಡವಕ್ಕಲಿಗೇರ, ದೇವಣ್ಣ ಚಾಕಲಬ್ಬಿ, ದಯಾನಂದ ಅಕ್ಕಿ, ಶ್ರೀಕಾತ ಬುಳ್ಳಕ್ಕನವರ, ಮಂಜುನಾಥ ಬ್ಯಾಹಟ್ಟಿ, ಸುಭಾಸ ಚವ್ಹಾಣ,ಕೊಟ್ಟರೆಪ್ಪ ನಡೂರ, , ಎಂ.ಎನ್.ವೆಂಕೋಜಿ, ತಿಪ್ಪಣ್ಣ ಸಾತಣ್ಣವರ, ಶಂಕರಗೌಡ್ರ ಪಾಟೀಲ, ಪರಶುರಾಮ ಸೊನ್ನದ, ರೂಪಾ ಬನ್ನಿಕೊಪ್ಪ, ಸಂಗೀತಾ ವಾಲ್ಮೀಕಿ, ವೀಣಾ ಹಿರೇಮಠ, ಸೋಮಶೇಖರ ಗೌರಿಮಠ, ಹೊನ್ನಪ್ಪ ಹುಗಾರ, ಟಿ.ವಿ.ಸುರಗೀಮಠ, ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಹನುಮಂತಪ್ಪ, ಡಾ.ವಿವೇಕ, ಬೊಮ್ಮಾಯಿ ಅಭಿಮಾನಿಗಳ ಬಳಗದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT