ಗುತ್ತಲ (ಹಾವೇರಿ ಜಿಲ್ಲೆ): ಕಂಟೇನರ್ ಲಾರಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 32 ಜಾನುವಾರುಗಳನ್ನು ರಕ್ಷಿಸಿ ವಶಪಡಿಸಿಕೊಳ್ಳಲಾಯಿತು.

ರಾಣೆಬೆನ್ನೂರ ಕಡೆಯಿಂದ ಗುತ್ತಲ ಮಾರ್ಗವಾಗಿ ಆಂಧ್ರಪ್ರದೇಶದ ಅನಂತಪುರ ನಗರದ ಕಸಾಯಿ ಖಾನೆಗೆ ಹೊರಟಿದ್ದ ಲಾರಿಯನ್ನು ಎಂ.ಜಿ ತಿಮ್ಮಾಪುರ ಗ್ರಾಮದ ಹತ್ತಿರ ಪಟ್ಟಣದ ಪಿಎಸ್ಐ ಸಿದ್ದಾರೂಢ ಬಡಿಗೇರ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.

ಲಾರಿಯಲ್ಲಿದ್ದ 9 ಕೋಣ, 16 ಎಮ್ಮೆ, ಏಳು ಎತ್ತುಗಳನ್ನು ರಕ್ಷಿಸಲಾಗಿದೆ ಎಂದು ಪಿಎಸ್ಐ ತಿಳಿಸಿದ್ದಾರೆ. ಲಾರಿಯಲ್ಲಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಎಲ್ಲ ಜಾನುವಾರುಗಳನ್ನು ರಾಣೆಬೆನ್ನೂರಿನಲ್ಲಿ ಖರೀದಿಸಲಾಗಿದೆ ಎನ್ನಲಾಗಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.