ಹಾವೇರಿ: 'ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಅಂದು ಮಹಾತ್ಮ ಗಾಂಧಿಯವರು ಬಟ್ಟೆ ಬಿಚ್ಚಿ ಹಾಕಿ ನಿಂತುಕೊಂಡು ಜನರಿಗೆ ಸ್ವಾತಂತ್ರ್ಯ ತಂದುಕೊಟ್ಟರು' ಎಂದು ನಟ, ನಿರ್ದೇಶಕ ಸಾಧು ಕೋಗಿಲ ಹೇಳಿದರು.

ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿರುವ ದುಂಡಶಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಮಕ್ಕಳು ಶಾಲೆಗೆ ಹೋಗುವಾಗ ಜಾತಿ ಇರುವುದಿಲ್ಲ. ಜಾತ್ರೆ, ಮಹೋತ್ಸವ ಮಾಡುವಾಗಲೂ ಜಾತಿ ಇರುವುದಿಲ್ಲ. ಆದರೆ, ಚುನಾವಣೆ ಬಂದರೆ ಧರ್ಮ-ಜಾತಿ ಬರುತ್ತದೆ' ಎಂದರು.

'ಚುನಾವಣೆಯಲ್ಲಿ ಜನರ ತಲೆ ಮೇಲೆ ಜಾತಿ-ಧರ್ಮದ ಕಲ್ಲು ಬಂಡೆ ಇರಿಸುತ್ತಾರೆ. ಯೋಚನೆ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ. ಇವರು ಗೆದ್ದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆದ್ದಂತೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.