ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರಜಿಗಿ ಗ್ರಾಮಸ್ಥರು ಉಚಿತವಾಗಿ ಜಮೀನು ನೀಡಿದರೆ ಕ್ರೀಡಾಂಗಣ: ಎಂ.ವೈ.ಪಾಟೀಲ್ 

Published : 28 ಸೆಪ್ಟೆಂಬರ್ 2024, 16:18 IST
Last Updated : 28 ಸೆಪ್ಟೆಂಬರ್ 2024, 16:18 IST
ಫಾಲೋ ಮಾಡಿ
Comments

ಅಫಜಲಪುರ: ‘ತಾಲ್ಲೂಕಿನ ಸಮಗ್ರ ನೀರಾವರಿ ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಜೊತೆಗೆ ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು ಭೀಮಾನದಿಯಿಂದ ಕಾಲುವೆ ಮೂಲಕ ನೀರು ಹರಿಸುವುದು ಮತ್ತು ಮಳೆ ನೀರು ಸಂಗ್ರಹಿಸಲು ಚೆಕ್‌ಡ್ಯಾಂ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು

ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಅಂದಾಜು ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ‘ಕರಜಗಿ ಹೋಬಳಿ ಕೇಂದ್ರದಲ್ಲಿ ಮಾಶಾಳ, ಮಣ್ಣೂರ, ಉಡಚಾಣ ದೊಡ್ಡ ಗ್ರಾಮಗಳಾಗಿದ್ದು ಈ ಭಾಗದ ಯುವ ಪ್ರತಿಭೆಗಳಿಗೆ ಅನುಕೂಲವಾಗಲು ಗ್ರಾಮಸ್ಥರು ಉಚಿತವಾಗಿ ಜಮೀನು ನೀಡಿದರೆ ಶೀಘ್ರದಲ್ಲೇ ಸುಸಜ್ಜಿತವಾದ ಗ್ರಾಮೀಣ ಕ್ರೀಡಾಂಗಣ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ತಾಲ್ಲೂಕಿನ ಬಂದರವಾಡ ಗ್ರಾಮದ ಭೀಮಾ ನದಿಯ ಹತ್ತಿರ ಏತ ನೀರಾವರಿ ಯೋಜನೆ ಅನುಷ್ಠನಗೊಳಿಸಿ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬುವ ಯೋಜನೆ ಸರ್ಕಾರದ ಮುಂದಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನಸಂಖ್ಯೆ ಆಧರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ’ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಮ್ಮ ಪಾಟೋಳೆ, ಗ್ರಾ.ಪಂ.ಉಪಾಧ್ಯಕ್ಷ ಇರ್ಫಾನ್‌ ಜಮಾದಾರ, ಜಿ.ಪಂ. ಮಾಜಿ ಸದಸ್ಯ ಪ್ರಕಾಶ ಜಮಾದಾರ, ತಹಶೀಲ್ದಾರ್‌ ಸಂಜೀವಕುಮಾರ ದಾಸರ, ಮುಖಂಡರಾದ ಮಹಾದೇವಗೌಡ ಕರೂಟಿ, ಭೀಮಾಶಂಕರ ಹೊನ್ನಕೇರಿ, ರಮೇಶ ಪೂಜಾರಿ, ಶಿವಾನಂದ ಗಾಡಿಸಾಹುಕಾರ, ರಾಮಣ್ಣ ನಾಯಕೋಡಿ, ಶರಣು ಈಶ್ವರಗೊಂಡ, ಮಲ್ಲು ಕಿಣಗಿ, ಶ್ರೀಕಾಂತ ಈಶ್ವರಗೊಂಡ, ಭೀಮಾಶಂಕರ ಬುಯ್ಯಾರ, ಸುರೇಶ ಉಪ್ಪಿನ್, ಲೋಕಣ್ಣ ಜಿಡ್ಡಗಿ, ಶಿವಶರಣ ಉಡಗಿ, ಶಂಕರಲಿಂಗ ನಡಗೇರಿ, ಇಸ್ಮಾಯಿಲ್ ಮುಲ್ಲಾ, ಮೌಲಾನಾ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT