ಬೆಂಗಳೂರು: ಮೈಸೂರು ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮತ್ತು ಬೀಗಲ್ಸ್ ಕ್ಲಬ್ ತಂಡಗಳು ಕ್ರಮವಾಗಿ ಇಲ್ಲಿ ನಡೆಯುತ್ತಿರುವ ರಾಜ್ಯ ಯೂತ್ (16 ವರ್ಷದೊಳಗಿನವರು) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಜಯಿಸಿದವು.

ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಪಂದ್ಯದಲ್ಲಿ ಮೈಸೂರು ತಂಡವು 53–44 (32–22) ರಿಂದ ಯಲಹಂಕ ನ್ಯೂಟೌನ್ ಕ್ಲಬ್ ವಿರುದ್ಧ ಗೆದ್ದಿತು. ಮೈಸೂರು ತಂಡದ ನೀಲ್ (28) ಮತ್ತು ಯಲಹಂಕದ ಚತುರ (30) ಅಂಕಗಳನ್ನು ಕಲೆಹಾಕಿದರು.

ಬಾಲಕಿಯರ ವಿಭಾಗದಲ್ಲಿ ಬೀಗಲ್ಸ್ ತಂಡವು 50–25 (31–10) ರಿಂದ ಯಲಹಂಕ ನ್ಯೂಟೌನ್ ವಿರುದ್ಧ ಗೆದ್ದಿತು. ಬೀಗಲ್ಸ್ ತಂಡದ ರಚನಾ (19) ಮತ್ತು ಯಲಹಂಕ ತಂಡದ ಯಶಸ್ವಿ (12) ಅಂಕ ಗಳಿಸಿದರು.

ಫಲಿತಾಂಶಗಳು: ಬಾಲಕರು: ಬಿ.ಸಿ.ಬಿ.ಸಿ 70 (ಸಮರ್ಥ್ 36) ತಂಡವು ಬೆಂಗಳೂರು ಸ್ಪೋರ್ಟಿಂಗ್ 18 ವಿರುದ್ಧ; ಯಂಗ್ ಒರಿಯನ್ಸ್ 65 (ಅವ್ಯಂ ಗುಪ್ತಾ 27) ತಂಡವು ವಿಮಾನಪುರ ತಂಡದ 51 (ಜೀವನ್ 23, ಸುಜನರಾಮ್ 15) ಎದುರು; ಡಿ.ಕೆ. ಜಿಲ್ಲೆ 53 (ಅರ್ಜುನ್ ರಾಜೇಶ್ 19, ದಿವಿತ್ 13) ತಂಡವು ರಾಜಕುಮಾರ್ ಬಿ.ಸಿ 46 (ಕನಿಷ್ಕ 14, ಅನಿರುದ್ಧ 14) ವಿರುದ್ಧ; ಹಾಸನ ಜಿಲ್ಲಾ ತಂಡವು 45 (ಕಿರಣ ರಾಜ್ 11, ಪ್ರೀತಂ 10) ತಂಡವು ಹಲಸೂರು 21 (ತನುಷ್ 9) ವಿರುದ್ಧ; ದಾವಣಗೆರೆ ಜಿಲ್ಲಾ ತಂಡವು 55 (ಸಾತ್ವಿಕ್ 14, ಲಕ್ಷಿತ್ 10) ತಂಡವು ದೇವಾಂಗ ಯೂನಿಯನ್ 39 (ಜಯಂತ್ 11) ವಿರುದ್ಧ; ಹೆಬ್ಬಾಳ ಬಿ.ಸಿ. ತಂಡವು 60 (ಸುಹಾಸ್ 22, ಪಾರ್ಥಸಾರಥಿ 16) ತಂಡವು ಬೀದರ್ ಜಿಲ್ಲೆ 35 (ಅಭಯ್ 10, ಶಿವರಾಜ್ 10) ವಿರುದ್ಧ ಜಯಿಸಿತು.

ಬಾಲಕಿಯರು: ಮೌಂಟ್ಸ್ ಕ್ಲಬ್ 74 (ತರುಶ್ರೀ 14, ನಿಲಯಾ ರೆಡ್ಡಿ 14, ಅರಾಧಮ್ 10) ತಂಡವು ಬೆಂಗಳೂರು ಸ್ಪೋರ್ಟಿಂಗ್ 14 ವಿರುದ್ಧ; ಸಿಜೆಸಿ 43 (ಯುಕ್ತಾ 26) ತಂಡವು ಕೋರಮಂಗಲ ಕ್ಲಬ್ 17 ವಿರುದ್ಧ; ಮಂಡ್ಯ ಜಿಲ್ಲಾ ತಂಡವು 43 (ಅಪೂರ್ವ 13) ತಂಡವು ವಿಜಯಪುರ ಜಿಲ್ಲಾ ತಂಡ 28 (ಶಿವಭಾಯ್ 13) ವಿರುದ್ಧ; ಒರಿಯನ್ಸ್ ಕ್ಲಬ್ 27 (ಮುಕ್ತಾ 10) ತಂಡವು ಸದರ್ನ್ ಬ್ಲ್ಯೂಸ್ 25 (ಹರಿಶ್ರೀ ಸಗಿ 15) ಎದುರು; ಡಿವೈಇಎಸ್ ವಿದ್ಯಾನಗರ ತಂಡವು 54 (ದೀಪಿಕಾ 25) ತಂಡವು ಎಂ.ಸಿ.ಎಚ್.ಎಸ್ 43 (ಶೈರಾ ಮಲ್ಹೋತ್ರಾ 11) ವಿರುದ್ಧ; ಹಾಸನ ಜಿಲ್ಲಾ ತಂಡವು 35 (ನೇಹಾ 18) ತಂಡವು ಎಂಎನ್‌ಕೆ ರಾವ್ ಪಾರ್ಕ್ 27 ತಂಡದ ವಿರುದ್ಧ ಗೆದ್ದಿತು. ಇನ್ನೊಂದು ಪಂದ್ಯದಲ್ಲಿ ಎಚ್‌ಬಿಆರ್ ತಂಡವು 40–9ರಿಂದ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.