ಸೇಡಂ ತಾಲ್ಲೂಕು ಒಂದರಲ್ಲೇ ಸಾವಿರಾರು ಎಕರೆ ವಕ್ಫ್ ಆಸ್ತಿ ಇದೆ. ಕೋಟೆಯ ಭಾಗ ವಕ್ಫ್ ಆದ ಬಗ್ಗೆ ಹೇಗೆ ಗೊತ್ತಿರುತ್ತದೆ. ಅಲ್ಲಿ ಹಾಕಿರುವ ಫಲಕದ ಸತ್ಯಾಂಶದ ಬಗ್ಗೆ ಮಾಹಿತಿ ಪಡೆಯುತ್ತೇನೆ
ಪ್ರಭುರೆಡ್ಡಿ ಉಪವಿಭಾಗಾಧಿಕಾರಿ ಸೇಡಂ
ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ವತಿಯಿಂದಲೇ ಕುಡಿಯುವ ನೀರು ವಿದ್ಯುತ್ ವ್ಯವಸ್ಥೆ ಮಾಡಿಕೊಡಲಾಗಿದೆ. ಗ್ರಾಮ ಪಂಚಾಯಿತಿಗೆ ಆಸ್ತಿ ಕರ ಸೇರಿ ಇತರ ತೆರಿಗೆಗಳನ್ನು ಪಾವತಿಸುತ್ತಿದ್ದೇವೆ
ಅಲಿಆಗಾ ಜಹಗೀರದಾರ ಮುಸ್ಲಿಂ ಸಮುದಾಯದ ಮುಖಂಡ
ಈಗ ವಕ್ಫ್ ವಿರುದ್ಧ ಇಷ್ಟು ಹೋರಾಡುತ್ತಿರುವ ಬಿಜೆಪಿ ನಾಯಕರ ಅವಧಿಯಲ್ಲೇ ಕೋಟೆಯ ಒಳಗಿನ ಪ್ರದೇಶ ವಕ್ಫ್ ಎಂದು ನೋಂದಣಿಯಾಗಿದೆ. ಅವರದ್ದು ನಕಲಿ ಹೋರಾಟ
ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥ
ವಕ್ಫ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅಲ್ಲಿ ಪುರಾತನ ಕಾಲದಿಂದಲೂ ಮನೆ ಆಶುರ್‌ಖಾನಾಗಳಿವೆ. ನಮ್ಮ ಪಂಚಾಯಿತಿ ವತಿಯಿಂದ ನೀರು ವಿದ್ಯುತ್ ಸೌಲಭ್ಯ ನೀಡಲಾಗುತ್ತಿದ್ದು ಅವರು ತೆರಿಗೆ ಪಾವತಿಸುತ್ತಾರೆ