ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇದಾರದಲ್ಲಿ ಪಂಚಾಕ್ಷರಿ ಸ್ವಾಮೀಜಿ ಮೌನಾನುಷ್ಠಾನ

Published : 28 ಸೆಪ್ಟೆಂಬರ್ 2024, 16:18 IST
Last Updated : 28 ಸೆಪ್ಟೆಂಬರ್ 2024, 16:18 IST
ಫಾಲೋ ಮಾಡಿ
Comments

ಸೇಡಂ: ‘ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಉತ್ತರಖಾಂಡ ರಾಜ್ಯದ ಕೇದಾರದಲ್ಲಿ ಮೌನಾನುಷ್ಠಾನ ಕೈಗೊಳ್ಳಲಿದ್ದಾರೆ’ ಎಂದು ಹಾಲಪ್ಪಯ್ಯ ವಿರಕ್ತ ಮಠದ ಟ್ರಸ್ಟಿ ನಾಗಯ್ಯಸ್ವಾಮಿ ಬೊಮ್ನಳ್ಳಿ ತಿಳಿಸಿದ್ದಾರೆ.

ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಕಲ್ಯಾಣಕ್ಕಾಗಿ ಮೌನಾನುಷ್ಠಾನ ಕೈಗೊಳ್ಳಲಿದ್ದು ದಸರಾದ ನವರಾತ್ರಿಯ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿಯ ಮೌನಾನುಷ್ಠಾನ ಕೈಗೊಳ್ಳಲಿದ್ಧಾರೆ. ಈ ನಿಮಿತ್ತ ಸೆ.30ರಂದು ಬೆಳಿಗ್ಗೆ 6 ಗಂಟೆಯಿಂದ ಸೇಡಂನಿಂದ ಹೈದ್ರಾಬಾದ್ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ದೆಹಲಿ ವಿಮಾನ ನಿಲ್ದಾಣ ತಲುಪಲಿದ್ದಾರೆ. ನಂತರ ಸ್ಥಳೀಯ ವಾಹನಗಳ ಮೂಲಕ ಕೇದಾರ ತಲುಪಿ ಮೌನಾನುಷ್ಠಾನ ಆರಂಭಿಸಲಿದ್ದಾರೆ. ತಮ್ಮ ಮೌನಾನುಷ್ಠಾನ ಸಮಾಪ್ತಿಗೊಳಿಸಿ, ಅ.18ರಂದು ಸೇಡಂ ಪುರ ಪ್ರವೇಶಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಯ್ಯಸ್ವಾಮಿ ಬಿಬ್ಬಳ್ಳಿ, ರಾಜಶೇಖರ ನೀಲಂಗಿ, ಮಹಿಪಾಲರೆಡ್ಡಿ ಮುನ್ನೂರ, ಶ್ರೀನಿವಾಸ ಕಾಸೋಜು, ಶಂಕ್ರಪ್ಪ ಮಾಸ್ತರ ಕೋಸಗಿ, ಶಿವಶರಣಪ್ಪ ಚಂದನಕೇರಿ, ಶರಣು ಕಿರಣಗಿ, ಅನೀಲ ಐನಾಪುರ, ಶಿವಕುಮಾರ ಬೋಳಶೆಟ್ಟಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT