ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ಪುರಸಭೆಯಲ್ಲೇ ದೂಳು ತಿನ್ನುತ್ತಿರುವ ಕಸದ ಡಬ್ಬಿಗಳು

ಸಿದ್ದರಾಜ ಮಲ್ಕಂಡಿ
Published : 5 ಅಕ್ಟೋಬರ್ 2024, 6:40 IST
Last Updated : 5 ಅಕ್ಟೋಬರ್ 2024, 6:40 IST
ಫಾಲೋ ಮಾಡಿ
Comments

ವಾಡಿ: ಹಸಿ ಮತ್ತು ಒಣ ತ್ಯಾಜ ವಿಂಗಡನೆ ಮಾಡಿ ಕಸ ವಿಲೇವಾರಿ ವಾಹನಗಳಲ್ಲಿ ಹಾಕಲು ಮನೆಗಳಿಗೆ ಹಂಚಬೇಕಿದ್ದ ಕಸದ ಡಬ್ಬಿಗಳು ಪುರಸಭೆ ನಿರ್ಲಕ್ಷ ವಹಿಸಿದ್ದ ಮೂಲೆಗುಂಪಾಗಿ ಹಾಳಾಗುತ್ತಿವೆ.

14ನೇ ಹಣಕಾಸು ಯೋಜನೆಯಡಿ ಪ್ಲಾಸ್ಟಿಕ್‌ ಡಬ್ಬಿಗಳನ್ನು ಖರೀದಿ ಮಾಡಿ ವರ್ಷವಾದರೂ ಜನರಿಗೆ ವಿತರಣೆ ಮಾಡದೇ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದೆ. ಇದಕ್ಕಾಗಿ 2020-21ನೇ ಹಣಕಾಸು ಯೋಜನೆಯ ಬೇಸಿಕ್‌ ಗ್ರಾಂಟ್‌ನಲ್ಲಿ ಪ್ಲಾಸ್ಟಿಕ್ ಡಬ್ಬಿಗಳನ್ನು ಖರೀದಿಸಿದೆ.

‘ಅಧಿಕಾರಿಗಳು ಮನೆಮನೆಗೆ ಕಸದ ಡಬ್ಬಿಗಳನ್ನು ವಿತರಿಸದ್ದರಿಂದ ತ್ಯಾಜ್ಯ ವಿಂಗಡನೆ ಸಾಧ್ಯವಾಗುತ್ತಿಲ್ಲ. ಮನೆಯಲ್ಲಿರುವ ಪಾತ್ರೆ, ಪ್ಲಾಸ್ಟಿಕ್‌ ಕವರ್‌ನಲ್ಲಿ ನಿತ್ಯ ಕಸ ತುಂಬಿಡುತ್ತಿದ್ದೇವೆ. ಎಲ್ಲ ರೀತಿಯ ಕಸವನ್ನೂ ಒಟ್ಟಿಗೇ ತುಂಬಿ ಕೊಡುತ್ತಿದ್ದೇವೆ. ಕಸ ತೆಗೆದುಕೊಂಡು ಹೋಗಲು ತಡವಾದರೆ ಮನೆಯಲ್ಲೇ ಹಸಿ ಕಸ ಕೊಳೆತು ದುರ್ನಾತ ಬೀರುತ್ತದೆ’ ಎಂದು ಗೃಹಿಣಿಯರು ಸಮಸ್ಯೆ ತೋಡಿಕೊಂಡರು.

ಒಣ ಕಸ ಸಂಗ್ರಹಕ್ಕೆ ಹಸಿರು, ಹಸಿ ಕಸಕ್ಕೆ ನೀಲಿ ಬಣ್ಣದ ಪ್ಲಾಸ್ಟಿಕ್ ಡಬ್ಬಿಗಳನ್ನು ಗುರುತಿಸಲಾಗಿದೆ. ಪ್ರತಿ ಮನೆಗೆ 2 ಡಬ್ಬಿಗಳನ್ನು ಮೊದಲ ಹಂತದಲ್ಲಿ ವಿತರಣೆ ಮಾಡುವ ಯೋಜನೆ ಇದಾಗಿದೆ. ಪಟ್ಟಿ ತಯಾರಿಸಿ ವಿತರಣೆ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಸ ಪ್ರತ್ಯೇಕಿಸುವ ಸವಾಲು:

‘ಮನೆ–ಮನೆಗಳಿಂದ ಕಸ ಸಂಗ್ರಹಿಸುವ ಆಟೊ, ಟಿಪ್ಪರ್‌ಗಳಲ್ಲಿ ಸ್ವಚ್ಛತೆ ಜಾಗೃತಿಯ ಹಾಡುಗಳನ್ನು ನಿತ್ಯ ಪ್ರಸಾರ ಮಾಡಲಾಗುತ್ತದೆ. ಘನತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ಕೊಡುವುದರಿಂದ ಕಸದ ವಿಲೇವಾರಿ ಸುಲಭವಾಗುತ್ತದೆ. ಆದರೆ ಡಬ್ಬಿಗಳ ಕೊರತೆಯಿಂದ ಬಹುತೇಕ ಮನೆಯವರು ಹಸಿ ಮತ್ತು ಒಣ ಕಸವನ್ನು ಒಟ್ಟಿಗೆ ಕೊಡುವುದರಿಂದ ಅದನ್ನು ವಿಲೇವಾರಿ ಮಾಡಲು ಪೌರಕಾರ್ಮಿಕರು ಪರದಾಡುತ್ತಿದ್ದಾರೆ.

ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪುರಸಭೆ ಅತ್ಯಂತ ಬೇಜವಾಬ್ದಾರಿ ತೋರುತ್ತಿದೆ. ತಕ್ಷಣ ಕಸದ ಡಬ್ಬಿಗಳ ವಿತರಣೆಗೆ ಕ್ರಮ ವಹಿಸಬೇಕು.
ವೀರಣ್ಣ ಯಾರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡಿ
ಇನ್ನೊಂದು ಹಂತದಲ್ಲಿ ಡಬ್ಬಿಗಳು ಬರಬೇಕಿದ್ದ ಕಾರಣ ಒಟ್ಟಿಗೆ ವಿತರಿಸಲು ಯೋಜನೆ ಹಾಕಿಕೊಂಡಿದ್ದೇವು. ಫಲಾನುಭವಿಗಳ ಪಟ್ಟಿ ಈಗಾಗಲೇ ಸಿದ್ದವಾಗಿದ್ದು ತಕ್ಷಣದಲೇ ಸ್ಲಂ ಬಡಾವಣೆಗಳಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು.
ಮುಖ್ಯಾಧಿಕಾರಿ, ಪುರಸಭೆ ವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT