ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದರು.

ಕಾರ್ಯಕರ್ತರು ಜೈಕಾರದೊಂದಿಗೆ ಆರ್. ಅಶೋಕ ಅವರನ್ನು ಸ್ವಾಗತಿಸಿದರು. ಶಾಲು ಹಾಕಿ ಬರಮಾಡಿಕೊಂಡು, ಕಾರ್ಯಕರ್ತರೊಬ್ಬರು ಅಶೋಕ ಅವರಿಗೆ ಹಾರ ಹಾಕಲು ಮುಂದಾದರು. ಆ ಹಾರ ತಮ್ಮ ಕೈಯಲ್ಲಿ ತೆಗೆದುಕೊಂಡು ಹಿರಿಯ ಮುಖಂಡ ಡಾ. ವಿಶ್ವನಾಥ್ ಪವಾರ್ ಅವರಿಗೆ ಹಾಕಿದರು. ಈ ವೇಳೆ ವಿಶ್ವನಾಥ ಅವರು ಅಶೋಕ ಅವರಿಗೆ ಕುಂಕುಮದ ತಿಲಕ ಹಚ್ಚಲು ಮುಂದಾದರು. ತಲೆಯನ್ನು ಹಿಂದಕ್ಕೆ ತೆಗೆದುಕೊಂಡ ಅಶೋಕ, ಬೇಡವೆಂದು ಕೈಯಿಂದ ತಡೆದು ತಿಲಕ ಹಚ್ಚಿಕೊಳ್ಳಲು ನಿರಾಕರಿಸಿದ್ದು ಕಂಡುಬಂತು.

ಈ ವೇಳೆ ಶಾಸಕ ಡಾ.ಅವಿನಾಶ ಜಾಧವ, ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.