ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿಯಲ್ಲಿ ಬಿರುಸಿನ ಮಳೆ

Published 4 ಜುಲೈ 2024, 15:47 IST
Last Updated 4 ಜುಲೈ 2024, 15:47 IST
ಅಕ್ಷರ ಗಾತ್ರ

ಕಲಬುರಗಿ: ನಗರ ಸೇರಿ ಜಿಲ್ಲೆಯ ಕೆಲವೆಡೆ ಗುರುವಾರ ಮಳೆ ಸುರಿದಿದೆ. ಕಲಬುರಗಿಯಲ್ಲಿ ಮಧ್ಯಾಹ್ನ ಸುಮಾರು 20 ನಿಮಿಷ ಬಿರುಸಿನಿಂದ ಮಳೆಯಾಯಿತು. ಬಳಿಕ ಮತ್ತೆ ಬಿಸಿಲಿನ ವಾತಾವರಣ ಕಂಡುಬಂತು.

ಸಂಜೆ 6 ಗಂಟೆ ಹೊತ್ತಿಗೆ ಮತ್ತೆ ಧಾರಾಕಾರ ಮಳೆಯಾಯಿತು. ಒಂದು ಗಂಟೆ ಕಾಲ ಜಿಟಿ–ಜಿಟಿ ಮಳೆಯಾಗಿದ್ದರಿಂದ ವಾತಾವರಣ ತುಸು ತಂಪಾಯಿತು. ದಿನವಿಡೀ ಸೆಕೆಯಿಂದ ಬಸವಳಿದಿದ್ದ ಜನ ಕೆಲಕಾಲ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಮೃತದೇಹ ಪತ್ತೆ:

ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೊತಂಗಲ ಗ್ರಾಮದ ಬಳಿ ಕಾಗಿಣಾ ನದಿ ದಾಟುವಾಗ ಬುಧವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮೃತಪಟ್ಟಿದ್ದು, ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಮೃತರನ್ನು ಸೇಡಂ ತಾಲ್ಲೂಕಿನ ಯಡಗಾ ಗ್ರಾಮದ ಮಲ್ಲಪ್ಪ ಸಾಬಣ್ಣ ಹಿರುಗೆಪ್ಪನವರ(45) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT