ಜೇವರ್ಗಿ: ಶಕಾಪುರ ತಪೋವನಮಠ ಸಹಸ್ರಾರು ಭಕ್ತ ಸಮೂಹವನ್ನು ಹೊಂದಿದೆ. ಶಖಾಪುರದ ಸಿದ್ದರಾಮ ಶಿವಾಚಾರ್ಯರು ಅನ್ನ ದಾಸೋಹ, ಜ್ಞಾನ ದಾಸೋಹದ ಜೊತೆಗೆ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯುವ ಮೂಲಕ ಮನುಕುಲ ಉದ್ಧಾರಕ್ಕೆ ಶ್ರಮಿಸಿದ್ದಾರೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ತಾಲ್ಲೂಕಿನ ಸುಕ್ಷೇತ್ರ ಶಕಾಪುರ (ಎಸ್.ಎ) ಗ್ರಾಮದ ವಿಶ್ವಾರಾಧ್ಯ ತಪೋವನ ಮಠದಲ್ಲಿ ಮಂಗಳವಾರ ನಡೆದ ಸಿದ್ಧರಾಮ ಶಿವಯೋಗಿಗಳ 74ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಾಸೋಹ ಸೇವೆಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಸಿದ್ಧರಾಮ ಶಿವಾಚಾರ್ಯರ ಸಮಾಜಮುಖಿ ಸೇವೆ ಶ್ಲಾಘನೀಯವಾಗಿದೆ’ ಎಂದರು.

ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ದರಾಮ ಶಿವಾಚಾರ್ಯರು, ‘ಲಿಂ. ಸಿದ್ಧರಾಮ ಶಿವಯೋಗಿಗಳು ಜೀವನದುದ್ದಕ್ಕೂ ಧರ್ಮ ಪ್ರಚಾರ ಹಾಗೂ ದಾಸೋಹ ಸೇವೆಯನ್ನು ನಡೆಸಿಕೊಂಡು ಬಂದಿದ್ದಾರೆ. ಸಮಾಜಕ್ಕೆ ಸಿದ್ಧರಾಮ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ’ ಎಂದರು.

ಪಾಳಾದ ಗುರುಮೂರ್ತಿ ಶಿವಾಚಾರ್ಯರು, ವೆಂಕಟಬೇನೂರಿನ ಸಿದ್ಧರೇಣುಕ ಶಿವಾಚಾರ್ಯರು, ನೆಲೋಗಿ ಸಿದ್ದಲಿಂಗ ಸ್ವಾಮಿ, ಕುಳೇಕುಮಟಗಿಯಗುರುಸ್ವಾಮಿ ಶರಣರು ಧಾರ್ಮಿಕ ಸಭೆಯ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿ ರೊಟ್ಟಿ, ಭಜ್ಜಿ ಪಲ್ಲೆಯ ಪ್ರಸಾದ ಸವಿದರು. ಪ್ರಸಾದಕ್ಕೆ 50 ಕ್ವಿಂಟಲ್ ಜೋಳ ಮತ್ತು ಸಜ್ಜೆ ರೊಟ್ಟಿಗಳನ್ನು ಸಿದ್ಧಪಡಿಸಲಾಗಿತ್ತು. 20 ಕ್ವಿಂಟಲ್ ವಿವಿಧ ಧಾನ್ಯಗಳು ಹಾಗೂ ವಿವಿಧ ತರಕಾರಿಗಳಿಂದ ಭಜ್ಜಿ ಪಲ್ಲೆ ಸಿದ್ಧಪಡಿಸಲಾಗಿತ್ತು.

ಲಿಂ.ಸಿದ್ಧರಾಮ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ ಹಾಗೂ ರುದ್ರಾಭಿಷೇಕ ನಡೆಸಲಾಯಿತು. ಸಂಜೆ ಗಂಟೆಗೆ ತಪೋವನಮಠದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ರಾತ್ರಿ 10ರಿಂದ ಬೆಳಗಿನ ಜಾವದವರೆಗೆ ಕಲಾವಿದರಿಂದ ಸಂಗೀತ ಹಾಗೂ ಭಜನೆ ಕಾರ್ಯಕ್ರಮ ನಡೆಸಲಾಯಿತು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ,ರಾಜಶೇಖರ ಸೀರಿ, ರೇವಣಸಿದ್ದಪ್ಪ ಸಂಕಾಲಿ, ಕಾಶಿರಾಯಗೌಡ ಯಲಗೋಡ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಡಾ.ಪಿ.ಎಂ.ಮಠ, ಅಂಬರೇಶ ಶಖಾಪುರ, ಚಂದ್ರಶೇಖರ ತುಂಬಗಿ, ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ಸಾವಿರಾರು ಜನ ಭಕ್ತರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.