ಆಳಂದ: ‘ದೇಶದ ಪ್ರತಿ ರೈತರೂ ಕೃಷಿಯಲ್ಲಿ ಏಳ್ಗೆ ಸಾಧಿಸಿದರೆ ಮಾತ್ರ ಹಳ್ಳಿಗಳೂ ಪ್ರಗತಿ ಹೊಂದಲಿವೆ’ ಎಂದು ಕಲಬುರಗಿ, ಬೀದರ್ ಮತ್ತು ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ ತಿಳಿಸಿದರು.

ತಾಲ್ಲೂಕಿನ ಸರಸಂಬಾ ಗ್ರಾಮದಲ್ಲಿ ರಾಯಚೂರು ಮತ್ತು ಕಲಬುರಗಿ ಕೃಷಿ ವಿಶ್ವವಿದ್ಯಾಲಯ ಹಾಗೂ ಸಮತಾ ಲೋಕ ಶಿಕ್ಷಣ ಸಮಿತಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ, ಸ್ವಾವಲಂಬನೆ ಬದಕಿಗೆ ಕೃಷಿಯಿಂದ ಮಾತ್ರ ಸಾಧ್ಯವಿದೆ. ಹೊಸ ತಂತ್ರಜ್ಞಾನ, ಮಿಶ್ರ ಬೇಸಾಯ ಹಾಗೂ ಹೈನುಗಾರಿಕೆ ಕೈಗೊಳ್ಳುವ ಮೂಲಕ ರೈತರೂ ಕೃಷಿಯಿಂದ ಲಾಭಗಳಿಸಲು ಸಾಧ್ಯವಿದೆ’ ಎಂದರು.

ಕಲಬುರಗಿ ಕೃಷಿ ವಿವಿ ಮುಖ್ಯಸ್ಥ ಡಾ.ಮಹಾಲಿಂಗಪ್ಪ ಧನೋಜಿ ಮಾತನಾಡಿದರು. ಮಾದನ ಹಿಪ್ಪರಗಿ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುರೇಖಾ ಸುತಾರ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಾತಲಿಂಗಪ್ಪ ಪಾಟೀಲ, ಕೃಷಿತಜ್ಞ ಡಾ.ಕೆ.ಎನ್. ದೊಡ್ಡಮನಿ, ಸಂಯೋಜಕ ಡಿ.ಎಚ್. ಪಾಟೀಲ, ಸತೀಶ ಕಾಳೆ, ಮಂಜುನಾಥ, ಜಗನ್ನಾಥ ದೇಶಮುಖ, ರಾಜಕುಮಾರ ಸಲಗರ, ವಿಶ್ವನಾಥ ಭಕರೆ, ಬಸವರಾಜ ಪಾಟೀಲ, ರಾಮಣ್ಣಾ ಸುತಾರ ಉಪಸ್ಥಿತರಿದ್ದರು.

ಸಂಗೀತ ಕಲಾವಿದರಾದ ಶಂಕರ ಹೂಗಾರ, ಶಿವಶರಣಪ್ಪ ಪೂಜಾರಿ ಅವರಿಂದ ರೈತಗೀತೆಗಳ ಗಾಯನ ಜರುಗಿತು.

ರಾಜಶೇಖರ ಬಸನಾಯಕ ನಿರೂಪಿಸಿದರೆ, ವಿದ್ಯಾರ್ಥಿನಿ ಐಶ್ವರ್ಯ ವಂದಿಸಿದರು. ಪ್ರಗತಿಪರ ರೈತರಾದ ಸಿದ್ದಲಿಂಗ ಯಳಸಂಗಿ, ಶರಣಪ್ಪ ಗಜರೆ, ಸಾವಳೇಶ್ವರ, ಖಂಡಪ್ಪ ಬೆಳಾಂ, ಪಡಸಾವಳಿ ಅವರಿಗೆ ರೈತಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸರಸಂಬಾ, ನಾಗಲೇಗಾಂವ, ಸಾವಳೇಶ್ವರ ಗ್ರಾಮದ ರೈತರೂ ಹಾಗೂ ರಾಯಚೂರು ಮತ್ತು ಕಲಬುರಗಿ ಕೃಷಿ ವಿವಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.