ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಎಂಟು ದಿನಗಳ ಬಳಿಕ ಶುಕ್ರವಾರ ನಿತ್ಯದ ಪೂಜಾ ಕೈಂಕರ್ಯಗಳು ಆರಂಭವಾದವು. ಬ್ರಹ್ಮಗಿರಿ ಪಕ್ಕದ ಗಜಗಿರಿ ಬೆಟ್ಟ ಕುಸಿದ ಬಳಿಕ ಕ್ಷೇತ್ರದಲ್ಲಿ ಪೂಜೆ ಸ್ಥಗಿತಗೊಂಡಿತ್ತು.

ನೀಲೇಶ್ವರ ಪದ್ಮನಾಭ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ದೋಷ ಪರಿಹಾರ ಪೂಜೆಯ ಮೂಲಕ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಕಾವೇರಿಯ ತೀರ್ಥ ಕುಂಡಿಕೆ ಬಳಿ ಪೂಜೆ ನೆರವೇರಿತು. ಅಗಸ್ತೇಶ್ವರನಿಗೂ ಪೂಜೆ ಸಲ್ಲಿಸಲಾಯಿತು.

ಶಾಸಕ ಕೆ.ಜಿ.ಬೋಪಯ್ಯ, ಭಾಗಮಂಡಲ–ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಹಾಜರಿದ್ದರು.

ಬೆಟ್ಟ ಕುಸಿದ ಸ್ಥಳದಿಂದ ಕಣ್ಮರೆಯಾದ ಉಳಿದ ಮೂವರಿಗೆ ಶುಕ್ರವಾರವೂ ಶೋಧ ನಡೆಯಿತು. ಸುಳಿವು ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.