ಮಡಿಕೇರಿ: ಕೊಡವ ನಾಟಕ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಮತ್ತು ವಿದ್ಯಾರ್ಥಿ, ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಲು ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯಯೋಜನೆ ರೂಪಿಸಿದೆ.

ಕೊಡಗಿನ ಆದಿ ಕವಿ ಮತ್ತು ರಂಗಭೂಮಿಯ ಆದ್ಯ ಪ್ರವರ್ತಕ ಹರದಾಸ ಅಪ್ಪಚ್ಚ ಕವಿ ರಚಿಸಿರುವ ನಾಲ್ಕು ನಾಟಕಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯನ್ನು ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳು ಮತ್ತು ಸಾರ್ವಜನಿಕರಿಗೆ ನಡೆಸಲಾಗುವುದು.

ಸ್ಪರ್ಧೆಯ ವಿವರಗಳು ಇಂತಿವೆ: ಅಪ್ಪಚ್ಚಕವಿ ನಾಟಕ ಪೈಪೋಟಿ: ಜನವರಿ, 23ರಂದು ಬೆಳಗ್ಗೆ 10ಗಂಟೆಗೆ ಮಡಿಕೇರಿಯ ಓಂಕಾರೇಶ್ವರ ರಸ್ತೆಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ನಿಯಮಗಳು: ಅಪ್ಪಚ್ಚ ಕವಿಯ ಕಾವೇರಿ, ಯಯಾತಿ, ಸುಬ್ರಹ್ಮಣ್ಯ ಮತ್ತು ಸಾವಿತ್ರಿ ನಾಟಕಗಳಲ್ಲಿ ಯಾವುದಾದರೊಂದನ್ನು ಅಭಿನಯಿಸಬೇಕು. ನಾಟಕ 60 ನಿಮಿಷ ಕಡ್ಡಾಯ ಕನಿಷ್ಠ ಅವಧಿ.

ಬಹುಮಾನಗಳ ವಿವರ: ಪ್ರಥಮ ಬಹುಮಾನ ರೂ. 25,000 ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನ ರೂ. 15,000 ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ರೂ. 10,000 ನಗದು ಮತ್ತು ಪಾರಿತೋಷಕ. ಅಲ್ಲದೇ ಉತ್ತಮ ನಿರ್ದೇಶನ, ಅಭಿನಯ, ಸಂಗೀತ, ರಂಗಸಜ್ಜಿಕೆ, ವೇಷಭೂಷಣಕ್ಕೆ ನಗದು ಬಹುಮಾನವಿದೆ.

ಕೊಡವ ನಾಟಕ ಪೈಪೋಟಿ: ಕೊಡವ ಭಾಷೆಯಲ್ಲಿನ ಸಾಮಾಜಿಕ, ಚಾರಿತ್ರಿಕ, ಪೌರಾಣಿಕ ಯಾವುದೇ ನಾಟಕವನ್ನು ಪ್ರದರ್ಶಿಸಲು ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು.

ಬಹುಮಾನಗಳ ವಿವರ: ಪ್ರಥಮ ಬಹುಮಾನ ರೂ, 15,000 ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾನ ರೂ. 10,000 ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ರೂ. 7,000 ನಗದು ಮತ್ತು ಪಾರಿತೋಷಕ. ಅಲ್ಲದೇ ಉತ್ತಮ ನಿರ್ದೇಶನ, ಅಭಿನಯ, ಸಂಗೀತ, ರಂಗಸಜ್ಜಿಕೆ, ವೇಷಭೂಷಣಕ್ಕೆ ನಗದು ಬಹುಮಾನವಿದೆ.

ಕೊಡವ ಪಾಟ್ಕೋರ್ ಆಟ್ ಪೈಪೋಟಿ: ಕೊಡವ ಹಾಡುಗಳಿಗೆ ನೃತ್ಯ ಸಂಯೋಜಿಸಿ, ಕೊಡವ ನೃತ್ಯ ಮತ್ತು ಗಾಯನಕ್ಕೆ ಉತ್ತೇಜನ ನೀಡಲು ಅಕಾಡೆಮಿ ವಿಶೇಷ ಕಾರ್ಯಯೋಜನೆಯನ್ನು ರೂಪಿಸಿದೆ. ಈ ಯೋಜನೆ ಕೊಡವ ಪಾಟ್ಕೋರ್ ಆಟ್ (ಕೊಡವ ಸಮೂಹ ನೃತ್ಯ ಸ್ಪರ್ಧೆ)

ಕೊಡವ ಸಮೂಹ ನೃತ್ಯ ಸ್ಪರ್ಧೆಯನ್ನು ಜನವರಿ, 24ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿ ಓಂಕಾರೇಶ್ವರ ರಸ್ತೆಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ನಿಯಮಗಳು: ಕೊಡವ ಹಾಡುಗಳಿಗೆ ಸಮೂಹ ನೃತ್ಯ ಸ್ಪರ್ಧೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಮತ್ತು ಸಾರ್ವಜನಿಕ ನೃತ್ಯ ತಂಡಗಳಿಗೆ ಒಂದು ವಿಭಾಗ, 10ನೇ ತರಗತಿಯಿಂದ ಕೆಳಗಿನ ತರಗತಿಯ ವಿದ್ಯಾರ್ಥಿಗಳಿಗೆ ಒಂದು ವಿಭಾಗ, ನೃತ್ಯ ತಂಡದಲ್ಲಿ ಗರಿಷ್ಠ 12 ಕಲಾವಿದರು ಮಾತ್ರ, ನೃತ್ಯದ ಅವಧಿ ಕನಿಷ್ಠ 4 ನಿಮಿಷ ಮತ್ತು ಗರಿಷ್ಠ 8 ನಿಮಿಷಕ್ಕೆ ಮೀರಬಾರದು.

ಬಹುಮಾನಗಳ ವಿವರ (ಎರಡೂ ವಿಭಾಗಕ್ಕೆ): ಪ್ರಥಮ ಬಹುಮಾನ ರೂ. 10,000 ನಗದು ಮತ್ತು ಪಾರಿತೋಷಕ, ದ್ವಿತೀಯ ಬಹುಮಾಣ ರೂ. 7,000 ನಗದು ಮತ್ತು ಪಾರಿತೋಷಕ, ತೃತೀಯ ಬಹುಮಾನ ರೂ. 5,000 ನಗದು ಮತ್ತು ಪಾರಿತೋಷಕ.

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಸ್ಪರ್ಧೆಯ ದಿನ ಸರಳ ವೇದಿಕೆ, ಧ್ವನಿವರ್ಧಕ, ಸಾಮಾನ್ಯ ಬೆಳಕು ಕಲ್ಪಿಸಲಾಗುವುದು ಹಾಗೂ ಸ್ಪರ್ಧಿಗಳಿಗೆ ಲಘುಉಪಹಾರದ ವ್ಯವಸ್ಥೆ ಇರುತ್ತದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಶಾಂತಮ್ಮ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.