ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಮ್ಮೆನತ್ತ ಗ್ರಾಮ ಪಂಚಾಯಿತಿ: ಪತ್ನಿಯ ಹೆಸರಲ್ಲಿ ಪತಿ ದರ್ಬಾರ್- ಹರಿದಾಡಿದ Video

Published : 25 ಸೆಪ್ಟೆಂಬರ್ 2024, 14:08 IST
Last Updated : 25 ಸೆಪ್ಟೆಂಬರ್ 2024, 14:08 IST
ಫಾಲೋ ಮಾಡಿ
Comments

ಮುಳಬಾಗಿಲು: ತಾಲ್ಲೂಕಿನ ಎಮ್ಮೆನತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಮ್ಮ ಅವರ ಅಧಿಕಾರವನ್ನು ಅವರ ಪತಿ ಹನುಮಪ್ಪ ರಾಜರೋಷವಾಗಿ ಚಲಾಯಿಸುತ್ತಿದ್ದಾರೆ ಎಂಬಂತಿರುವ ವಿಡಿಯೊವೊಂದು ವಾಟ್ಸ್ಆ್ಯಪ್ ಗುಂಪಿನಲ್ಲಿ ಹರಿದಾಡುತ್ತಿದೆ. 

ಎಮ್ಮೆನತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವು ಮಹಿಳಾ ಮೀಸಲಾತಿ ಹೊಂದಿದ್ದು, ಸುಮಿತ್ರಮ್ಮ ಎಂಬುವರು ಅಧ್ಯಕ್ಷೆಯಾಗಿದ್ದಾರೆ. ಆದರೆ, ಅವರ ಸ್ಥಾನದಲ್ಲಿ ಅವರ ಪತಿ ಅಧಿಕಾರ ನಡೆಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. 

ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಅಥವಾ ಸದಸ್ಯ ಸ್ಥಾನ ಅಲಂಕರಿಸುವ ಮಹಿಳೆಯರೇ ಅಧಿಕಾರ ನಡೆಸಬೇಕು. ಮಹಿಳೆಯರ ಹೆಸರಿನಲ್ಲಿ ಅವರ ತಂದೆ, ಗಂಡ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರು ಅಧಿಕಾರ ಚಲಾಯಿಸಬಾರದು. ಅವರ ಪರವಾಗಿ ಯಾವುದೇ ಸಭೆ ಮತ್ತು ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂಬುದಾಗಿ ಪಂಚಾಯಿತಿ ಕಾಯ್ದೆಯ ಅಡಿ ಕಾನೂನು ಇದೆ. ಆದಾಗ್ಯೂ, ಹನುಮಪ್ಪ ತಮ್ಮ ಪತ್ನಿಯ ಅಧ್ಯಕ್ಷ ಗಾದಿಯಲ್ಲಿ ಕುಳಿತಂತೆ ಇರುವ ವಿಡಿಯೊ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT