ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಗಂಗಾ ಶಾಲೆಗೆ ಪ್ರಶಸ್ತಿ

ಸಿಬಿಎಸ್ಇ ವಲಯ- 8 ಕೊಕ್ಕೊ ಟೂರ್ನಿ
Published : 25 ಸೆಪ್ಟೆಂಬರ್ 2024, 16:10 IST
Last Updated : 25 ಸೆಪ್ಟೆಂಬರ್ 2024, 16:10 IST
ಫಾಲೋ ಮಾಡಿ
Comments

ಬೆಂಗಳೂರು: ಆತಿಥೇಯ ಶ್ರೀಸಿದ್ಧಗಂಗಾ ಹಿರಿಯ ಪ್ರಾಥಮಿಕ ಶಾಲಾ ತಂಡವು ನವದೆಹಲಿಯ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ ಬುಧವಾರ ಮುಕ್ತಾಯವಾದ ಸಿಬಿಎಸ್ಇ ವಲಯ- 8 ಕೊಕ್ಕೊ ಟೂರ್ನಿಯ 19 ವರ್ಷದೊಳಗಿನವರ ಬಾಲಕಿಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ತುಮಕೂರು ಮಾರುತಿ ವಿದ್ಯಾ ಕೇಂದ್ರವು ರನ್ನರ್‌ ಅಪ್‌ ಆಯಿತು. ಇದೇ ವಯೋಮಾನದ ಬಾಲಕರ ವಿಭಾಗದಲ್ಲಿ ಪೊಲೀಸ್ ಪಬ್ಲಿಕ್ ಸ್ಕೂಲ್ ಪ್ರಥಮ; ಸಿದ್ಧಗಂಗಾ ಶಾಲೆ ದ್ವಿತೀಯ ಸ್ಥಾನ ಪಡೆಯಿತು.

17 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಬೆಳಗಾವಿಯ ಎಸ್.ಎಂ. ಕಲ್ಲುತಿ ಚಂದರಗಿ ಶಾಲೆ ಪ್ರಥಮ; ಮೈಸೂರಿನ ಈಸ್ಟ್ ವೆಸ್ಟ್ ಶಾಲೆ ದ್ವಿತೀಯ; ಬಾಲಕಿಯರ ವಿಭಾಗದಲ್ಲಿ ಚಿತ್ರಕೂಟ ಶಾಲೆ ಪ್ರಥಮ; ಹೊನ್ನಾಳಿ ಶ್ರೀಸಾಯಿ ಗುರುಕುಲ ದ್ವಿತೀಯ ಸ್ಥಾನ ಗಳಿಸಿತು.

14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಚಿತ್ರಕೂಟ ಶಾಲೆ ಪ್ರಥಮ; ಸಿದ್ಧಗಂಗಾ ಶಾಲೆ ದ್ವಿತೀಯ; ಬಾಲಕಿಯರ ಸ್ಪರ್ಧೆಯಲ್ಲಿ ಹೊನ್ನಾಳಿ ಸಾಯಿ ಗುರುಕುಲ ಪ್ರಥಮ; ನಿರ್ವಾಣ ಸ್ವಾಮಿ ಶಾಲೆ ದ್ವಿತೀಯ ಸ್ಥಾನ ಪಡೆಯಿತು.

ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್, ಸಿಬಿಎಸ್ಇ ಪ್ರಾದೇಶಿಕ ಅಧಿಕಾರಿ ರಮೇಶ್ ಪಿ., ಅಂತರರಾಷ್ಟ್ರೀಯ ಕೊಕ್ಕೊ ಆಟಗಾರ್ತಿ ವೀಣಾ ಎಂ., ಸಿದ್ಧಗಂಗಾ ಶ್ರೀಶಿವಕುಮಾರ ಸ್ವಾಮೀಜಿ ವಿದ್ಯಾಪೀಠ ಟ್ರಸ್ಟ್‌ನ ಅಧ್ಯಕ್ಷ ಎಲ್. ರೇವಣಸಿದ್ದಯ್ಯ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ವಿದ್ಯಾಪೀಠ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಎಸ್. ಮೃತ್ಯುಂಜಯ, ಖಜಾಂಚಿ ಡಾ.ಆರ್‌. ಲೋಕಪ್ರಕಾಶ್‌, ಶೈಕ್ಷಣಿಕ ಸಲಹೆಗಾರ ಟಿ.ಎಸ್‌. ತುಳಸಿಕುಮಾರ್‌ ಮತ್ತು ಪ್ರಾಂಶುಪಾಲರಾದ ಟಿ.ಎಂ. ಹಂಸಾ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT