ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವೇಗಮಡುಗು ಗ್ರಾಮದಲ್ಲಿ ವರನೊಬ್ಬ ಒಂದೇ ಮೂಹರ್ತದಲ್ಲಿ ಅಕ್ಕ–ತಂಗಿಯನ್ನು ಒಟ್ಟಿಗೆ ಮದುವೆಯಾಗಿದ್ದು, ನವ ದಂಪತಿಯ ಮದುವೆ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಳಬಾಗಿಲು ತಾಲ್ಲೂಕು ಚಿನ್ನಬಾಲೇಪಲ್ಲಿ ಗ್ರಾಮದ ಉಮಾಪತಿ ಅವರು ವೇಗಮಡುಗು ಗ್ರಾಮದ ಸುಪ್ರಿಯಾ ಮತ್ತು ಲಲಿತಾ ಸಹೋದರಿಯರ ಜತೆ ಮೇ 7ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಸುಪ್ರಿಯಾ ಅವರಿಗೆ ಮಾತು ಬರುವುದಿಲ್ಲ. ಹಿರಿಯ ಮಗಳು ಸುಪ್ರಿಯಾ ಮದುವೆಯಾಗದಿದ್ದರೆ ಲಲಿತಾಗೂ ಮದುವೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪೋಷಕರು ಚಿಂತಿತರಾಗಿದ್ದರು. ಹೀಗಾಗಿ ಪೋಷಕರು ತಮ್ಮ ಮೊದಲ ಮಗಳನ್ನು ವಿವಾಹವಾದರೆ ಮಾತ್ರ 2ನೇ ಮಗಳು ಲಲಿತಾಳನ್ನು ಕೊಟ್ಟು ಮದುವೆ ಮಾಡುವುದಾಗಿ ವರ ಉಮಾಪತಿಗೆ ಷರತ್ತು ವಿಧಿಸಿದ್ದರು.

ಜೀವನವಿಡೀ ಅಕ್ಕನಿಗೆ ಮದುವೆ ಆಗುವುದಿಲ್ಲ ಎಂದು ಯೋಚಿಸಿದ ಲಲಿತಾ ಸಹ ಈ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದರು. ಸುಪ್ರಿಯಾ ಪೋಷಕರ ಷರತ್ತಿಗೆ ಸಮ್ಮತಿಸಿದ ಉಮಾಪತಿ ಅವರು ಸುಪ್ರಿಯಾ ಸಹೋದರಿಯರ ಜತೆ ಒಟ್ಟಿಗೆ ಹಸೆಮಣೆ ಏರಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಮತ್ತು ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೊದಲಲ್ಲ

ಸುಪ್ರಿಯಾ ಅವರ ಕುಟುಂಬದಲ್ಲಿ ಈ ರೀತಿಯ ಮದುವೆ ಇದೇ ಮೊದಲಲ್ಲ. ಅವರ ತಂದೆ ನಾಗರಜಪ್ಪ ಸಹ ಒಂದೇ ಮೂಹರ್ತದಲ್ಲಿ ಅಕ್ಕ–ತಂಗಿಯನ್ನು ಮದುವೆ ಮಾಡಿಕೊಂಡಿದ್ದರು. ಆ ಸಹೋದರಿಯರಲ್ಲಿ ಒಬ್ಬರಿಗೆ ಮಾತು ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.