ಬಂಗಾರಪೇಟೆ: ಹೈದರಾಲಿ ಜನ್ಮಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದ ಹೈದರಾಲಿ ಕೋಟೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಮೈಸೂರು ರಾಜ್ಯವನ್ನಾಳಿದ ಹೈದರಾಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಕ್ರಿ.ಶ. 1721ರಲ್ಲಿ ಜನಿಸಿದನು. ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ಹೈದರಾಲಿ ಮೊದಲು ಮೈಸೂರು ರಾಜರಿಗೆ ಸಾಮಂತನಾಗಿದ್ದ.

ಹೈದರಾಲಿ ಹುಟ್ಟಿ ಬೆಳೆದ ಕೋಟೆಯ ಸುತ್ತು ಗೋಡೆ ಈಗ ನೆಲಕ್ಕೆ ಉರುಳಿದೆ. ನಾಲ್ಕು ಮೂಲೆಗಳಲ್ಲಿದ್ದ ವೀಕ್ಷಣಾ ಗೋಪುರಗಳು ಕುಸಿದಿವೆ. ಕೋಟೆ ಮುಂಭಾಗ ಕಬ್ಬಿಣದ ಬೇಲಿ ಅಳವಡಿಸಿ, ಒಬ್ಬ ಕಾವಲುಗಾರನನ್ನು ನೇಮಿಸಲಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ಸ್ಥಳವನ್ನು ‘ರಾಷ್ಟ್ರೀಯ ಮಹತ್ವದ ಸ್ಮಾರಕ’ ಎಂದು ಘೋಷಿಸಿದೆ. ಕೋಟೆಯ ಸುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಸೂಚಿಸಿ, ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇರುವುದಿಲ್ಲ ಎಂದೂ ಬರೆಯಲಾಗಿದೆ. ಆದರೆ ಇದೆಲ್ಲವೂ ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ. ಕೋಟೆ ಅಂಚಿನಲ್ಲಿಯೇ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಮನೆ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಗತವೈಭವ ಬಿಂಬಿಸುವ ಇಲ್ಲಿನ ಅವಶೇಷಗಳು ಮರೆಯಾಗುತ್ತಿವೆ ಎಂಬುದು ಇತಿಹಾಸ ಪ್ರಿಯರ ಆರೋಪ.

ಕೋಟೆ ಪ್ರವೇಶ ದ್ವಾರದಲ್ಲಿ ‘ಹೈದರಾಲಿ ಹುಟ್ಟಿದ ಸ್ಥಳ’ 1720ರಿಂದ 1782ರವರಿಗೆ ಹೈದರಾಲಿ ಇಲ್ಲಿ ಆಳ್ವಿಕೆ ನಡೆಸಿದರು ಎಂಬ ಕಲ್ಲಿನ ಫಲಕ ನಿಲ್ಲಿಸಲಾಗಿದೆ. ಒಳಗೆ ಪುರಾತನ ಕಾಲದ ವೇಣುಗೋಪಾಲ ಹಾಗೂ ಸುಗ್ರೀವ ಗುಡಿಗಳಿವೆ. ಒಂದು ಕೊಳವೂ ಇದೆ. ಮಧ್ಯದಲ್ಲಿ ಹೈದರಾಲಿ ಹುಟ್ಟಿದ ಸ್ಥಳ ಎಂಬ ಸ್ಮಾರಕ ಶಿಲೆ ಇಡಲಾಗಿದ್ದು, ಸುತ್ತ ಸುಮಾರು 5 ಅಡಿ ಗೋಡೆ ಕಟ್ಟಿ ಕಬ್ಬಿಣದ ಬಾಗಿಲು ಅಳವಡಿಸಲಾಗಿದೆ.

ಕೋಟೆಯೊಳಗೆ ಸ್ಮಾರಕ ನಿರ್ಮಿಸಿ ಪ್ರವಾಸಿ ಕೇಂದ್ರವಾಗಿ ಮಾರ್ಪಡಿಸುವ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ವರ್ಷದ ಹಿಂದೆ ವಕ್ಫ್ ಬೋರ್ಡ್ ಅವರ ಗಮನಕ್ಕೂ ತರಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಐತಿಹಾಸಿಕ ಮಹತ್ವ ಇರುವ ಈ ಪ್ರದೇಶದಲ್ಲಿ ದೇಶಿಯ ಹಾಗೂ ವಿದೇಶಿ ಪ್ರವಾಸಿಗರೂ ಬರುತ್ತಾರೆ. ಆದರೆ, ಇಲ್ಲಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದಂಥ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ.

ಬೂದಿಕೋಟೆಯ ಆವರಣದಲ್ಲಿರುವ ವೇಣುಗೋಪಾಲ ದೇವಾಲಯವು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧೀನದಲ್ಲಿದೆ. ಆದರೆ, ಅಲ್ಲೂ ಅಭಿವೃದ್ಧಿ ಕಾರ್ಯಗಳಾಗಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಕೋಲಾರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಮಂಗಳಗೌರಿ ಭಟ್ ಅವರು, ‘ಬೂದಿಕೋಟೆಯು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ’ ಎಂದು ತಿಳಿಸಿದ್ದಾರೆ.

ಐತಿಹಾಸಿಕ ಹೈದರಾಲಿ ಕೋಟೆಯನ್ನು ರಕ್ಷಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಕಾಳಜಿ ವಹಿಸಬೇಕು.
ಭಾನುಪ್ರಕಾಶ್ ಬೂದಿಕೋಟೆ

ಹೈದರಾಲಿ ಜನ್ಮಸ್ಥಳ ಅಭಿವೃದ್ಧಿ ಪಡಿಸಿ ಮೂಲಸೌಕರ್ಯ ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕಿದೆ
ನಜೀರ್ ಪಾಷಾ ಬಂಗಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.