ಕೋಲಾರ: ಜಿಲ್ಲೆಯ ಹೆಸರಾಂತ ಜನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ (45) ಅವರನ್ನು ಪತ್ನಿಯೇ ಪ್ರಿಯಕರನ ಜೊತೆಗೂಡಿ ಸೋಮವಾರ ರಾತ್ರಿ ಜನ್ನಘಟ್ಟ ಬಳಿ ಕೊಲೆ ಮಾಡಿದ್ದಾರೆ. ಪತ್ನಿ ಸೇರಿದಂತೆ ಮೂವರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜನ್ನಘಟ್ಟ ಕೃಷ್ಣಮೂರ್ತಿ ಅವರ ಪತ್ನಿ ಸೌಮ್ಯಾ, ಆಕೆ ಪ್ರಿಯಕರ ಶ್ರೀನಿವಾಸಪುರದ ಚೊಕ್ಕರೆಡ್ಡಪಲ್ಲಿ ಶ್ರೀಧರ್ ಹಾಗೂ ಆತನ ಗೆಳೆಯನ ವಿರುದ್ಧ ಮೃತರ ತಾಯಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿರುವ ಕೋಲಾರ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸೋಮವಾರ ರಾತ್ರಿ 8.10ರ ಸುಮಾರಿಗೆ ಕೃಷ್ಣಮೂರ್ತಿ ಕೋಲಾರದಿಂದ ಜನ್ನಘಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಆಗ ರೈಲ್ವೆ ಅಂಡರ್‌ಪಾಸ್ ಬಳಿ ಅಡ್ಡಹಾಕಿ ಕೊಲೆ ಮಾಡಿ ಆರೋಪಿಗಳು, ದ್ವಿಚಕ್ರ ವಾಹನದಲ್ಲಿ ಬಿದ್ದು ಕೃಷ್ಣಮೂರ್ತಿ ಮೃತಪಟ್ಟಿರುವಂತೆ ಬಿಂಬಿಸಲು ಪ್ರಯತ್ನಿಸಿದ್ದರು.

ಕೋಲಾರದ ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿತ್ತು. ಕೃಷ್ಣಮೂರ್ತಿ ಅವರ ಪತ್ನಿ ಸೌಮ್ಯಾಳನ್ನು ವಿಚಾರಣೆಗೆ ಒಳಪಡಿಸಿದಾಗ ಅನೈತಿಕ ಸಂಬಂಧದ ವಿಚಾರವಾಗಿ ಕೊಲೆ ನಡೆದಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜನ್ನಘಟ್ಟ ಕೃಷ್ಣಮೂರ್ತಿ ಜನಪದ ಕಲಾವಿರಾಗಿ ಜಿಲ್ಲೆಯಲ್ಲಿ ಜನಪ್ರಿಯರಾಗಿದ್ದರು. ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷರಾಗಿ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಸಾಂಸ್ಕೃತಿಕ ಶಾಖೆ ರಾಜ್ಯ ಅಧ್ಯಕ್ಷರೂ ಆಗಿದ್ದರು. ಜಿಲ್ಲೆಯ ಬಹುತೇಕ ಕಾರ್ಯಕ್ರಮಗಳು ಅವರ ಗಾಯನದ ಮೂಲಕ ಆರಂಭವಾಗುತ್ತಿದ್ದವು. ಸ್ವಗ್ರಾಮ ಜನ್ನಘಟ್ಟದಲ್ಲಿ ಮಂಗಳವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.