ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧ ಘಟಕ, ಸುಸಜ್ಜಿತ ಸಿ.ಸಿ ರಸ್ತೆಗಳು, ಹೆದ್ದಾರಿಯಿಂದ ಡಾಂಬರೀಕರಣ ಅಥವಾ ಸಿಮೆಂಟ್ ರಸ್ತೆ, ಸ್ಮಶಾನ, ಅಂಗನವಾಡಿ ಸೇರಿದಂತೆ ಇನ್ನಿತರ ಸೌಕರ್ಯಗಳೇ ಇಲ್ಲ. ಈ ಎಲ್ಲ ಸಮಸ್ಯೆಗಳಿಂದಾಗಿ ಜನರು ಪ್ರತಿನಿತ್ಯವು ಹೈರಾಣಾಗುತ್ತಿದ್ದಾರೆ. ಈ ಕುರಿತು ಅನೇಕ ಬಾರಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.
-ಜೆ.ಎಂ.ಆರ್.ಹರಿನಾಥ ರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ
ಗ್ರಾಮದಲ್ಲಿ ಈಚೆಗೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಸ್ಮಶಾನಕ್ಕೆ ಸ್ಥಳ ಕಲ್ಪಿಸುವ ವಿಚಾರವು ಕಂದಾಯ ಇಲಾಖೆಗೆ ಸೇರಿದ್ದು, ಅಂಗನವಾಡಿ ಕಟ್ಟಡ ನಿರ್ಮಾಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದೆ. ನರೇಗಾದಲ್ಲಿ ₹1 ಕೋಟಿಗೆ ಕ್ರಿಯಾ ಯೋಜನೆ ಆದರೆ ಸಿ.ಸಿ ರಸ್ತೆಗಳ ನಿರ್ಮಾಣಕ್ಕೆ ಕೇವಲ ಶೇ 10 ಮಿಸಲಿಡಲಾಗುತ್ತದೆ. ಹೀಗಾಗಿ ಸಿಸಿ ರಸ್ತೆಗಳೆಲ್ಲವನ್ನೂ ನಿರ್ಮಿಸಲಾಗದು.
- ಚಿಕ್ಕ ನರಸಿಂಹಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ