ಕೆಜಿಎಫ್: ಕುಡಿಯುವ ನೀರು, ಮೇವು ಅರಿಸಿ ನಾಡಿನತ್ತ ಬಂದ ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಬೆಮಲ್ ನಗರದ ಹೊರವಲಯದಲ್ಲಿ ಸಾಯಿಸಿದೆ.

ಬೆಮಲ್ ನಗರದ ಬಳಿಯ ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ನಲ್ಲಿ ಗಂಡು ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಸಾಯಿಸಿವೆ. ಸಮೀಪದ ಬಡಮಾಕನಹಳ್ಳಿ ಕಾಡಿನಿಂದ ಜಿಂಕೆಗಳು ನೀರನ್ನು ಅರಿಸಿ ಬರುತ್ತಿದ್ದವು. ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆ ಮತ್ತು ಕೈಗಾರಿಕೆಗಳಿದ್ದ ಜಾಗ ಜಿಂಕೆಗಳ ಅವಾಸಸ್ಥಾನವಾಗಿದ್ದು, ಅಲ್ಲಿದ್ದ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಜಿಂಕೆಗಳಿಗೆ ಮೇವು ಮತ್ತು ನೀರಿನ ಲಭ್ಯತೆ ಕಡಿಮೆಯಾಗಿದೆ. ಹಾಗಾಗಿ ಕಾಡಿನ ಜಿಂಕೆಗಳು ನಾಡಿಗೆ ಮೇವು ಅರಿಸಿ ಬರುತ್ತಿವೆ.

ಜಿಂಕೆಗಳು ಕಾಡಿನಿಂದ ನಾಡಿನತ್ತ ಬರದಂತೆ ತಡೆಯಲು ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದು ವಾಯ್ಸ್ ಫಾರ್ ವೈಲ್ಡ್ ಲೈಫ್ ಮುಖಂಡ ಸ್ನೇಕ್ ರಾಜ ಒತ್ತಾಯಿಸಿದ್ದಾರೆ. ಸಾವಿಗೀಡಾದ ಕೃಷ್ಣಮೃಗ ಕಳೇಬರವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.