ಮಾಲೂರು (ಕೋಲಾರ): ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಂಪತಿ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮಾಡಿಸಿಕೊಂಡ ಆರೋಪ ಕೇಳಿ ಬಂದಿದ್ದು, ಹೆಣ್ಣು ಭ್ರೂಣವೆಂದು ತಿಳಿದು ಗರ್ಭಪಾತ ಮಾಡಿಸಿದ್ದಾರೆ. ಬಳಿಕ, ಅದು ಗಂಡು ಭ್ರೂಣ ಎಂದು ಗೊತ್ತಾಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ಹೆಣ್ಣು ಭ್ರೂಣವಿದೆ ಎಂದು ಹೇಳಿ ವೈದ್ಯರು ಮಾತ್ರೆ ನೀಡಿ ಗರ್ಭಪಾತ ಮಾಡಿಸಿದರು. ಗರ್ಭಪಾತದ ನಂತರ ಅದು ಹೆಣ್ಣು ಭ್ರೂಣವಲ್ಲ, ಗಂಡು ಭ್ರೂಣ ಎಂದು ಗೊತ್ತಾಯಿತು’ ಎಂದು ದಂಪತಿ ಆರೋಪ ಮಾಡಿದ್ದಾರೆ. ಈ ಸಂಬಂಧ ತಾಲ್ಲೂಕು ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.

ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಆರೋಪ ಎದುರಿಸುತ್ತಿರುವ ಪಟ್ಟಣದ ಸಂಜನಾ ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗವನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಶನಿವಾರ ಸೀಲ್ ಮಾಡಿದ್ದಾರೆ. ಸ್ಕ್ಯಾನಿಂಗ್ ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ. ಆಸ್ಪತ್ರೆಗೆ ನೋಟಿಸ್ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್, ತನಿಖೆ ಕೈಗೊಂಡಿದ್ದಾರೆ.

‘₹25 ಸಾವಿರ ಪಡೆದು ಭ್ರೂಣ ಲಿಂಗ ಪರೀಕ್ಷೆ ನಡೆಸಿದ ಆಸ್ಪತ್ರೆಯ ವೈದ್ಯರು, ಹೊಟ್ಟೆಯಲ್ಲಿ ಹೆಣ್ಣು ಮಗು ಇದೆ ಎಂದು ಹೇಳಿದರು. ಮಾತ್ರೆ ನೀಡಿ ಗರ್ಭಪಾತ ಮಾಡಿಸಿ, ಮೂರು ತಿಂಗಳ ಭ್ರೂಣ ಹತ್ಯೆ ಮಾಡಿದ್ದಾರೆ’ ಎಂದು ಕೆಜಿಎಫ್ ತಾಲ್ಲೂಕಿನ ಆಡಂಪಲ್ಲಿ ಗ್ರಾಮದ ಮುರುಗೇಶ್ ಹಾಗೂ ಅನಿತಾ ದಂಪತಿ ಆರೋಪಿಸಿದ್ದಾರೆ.

‘ಸ್ಕ್ಯಾನಿಂಗ್ ಮಾಡಿಸಲು ಮೇ 6ರಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಸ್ಕ್ಯಾನಿಂಗ್ ಮಾಡಿ ಯಾವ ಮಗು ಎಂಬುದಾಗಿ ತಿಳಿಸುತ್ತೇವೆ ಎಂದರು. ಆಕಸ್ಮಾತ್ ಹೆಣ್ಣು ಮಗು ಇದ್ದರೆ ಚಿಕಿತ್ಸೆ ನೀಡಿ ಗಂಡು ಮಗುವನ್ನಾಗಿ ಪರಿವರ್ತಿಸುತ್ತೇವೆ. ಅದಕ್ಕೆ ₹25 ಸಾವಿರ ಖರ್ಚಾಗುತ್ತದೆ ಎಂದರು. ಸ್ಕ್ಯಾನಿಂಗ್ ಮಾಡಿ ಹೆಣ್ಣು ಮಗುವೆಂದು ಹೇಳಿದರು. ಹೆಣ್ಣು ಮಗು ಬೇಡವೆಂದರೆ ತಾಯಿಗೆ ತೊಂದರೆ ಆಗದ ರೀತಿ ಗರ್ಭಪಾತ ಮಾಡುವುದಾಗಿ ₹75 ಸಾವಿರಕ್ಕೆ ಬೇಡಿಕೆ ಇಟ್ಟರು. ಹಣವಿಲ್ಲದ ಕಾರಣ ಯಾವ ಚಿಕಿತ್ಸೆ ಬೇಡ ಎಂದೆವು. ಅವರು ನೀಡಿದ ಮಾತ್ರೆ ಸೇವಿಸಿ ಮೇ 8ರಂದು ಪತ್ನಿಗೆ ಗರ್ಭಪಾತವಾಗಿದೆ. ಭ್ರೂಣ ಗಂಡು ಮಗುವಿನ ಆಕಾರದಲ್ಲಿದೆ’ ಎಂದು ಮುರುಗೇಶ್ ದೂರಿನಲ್ಲಿ ತಿಳಿಸಿದ್ದಾರೆ.

‘ಗಂಡು ಮಗು ಎಂಬುದು ಗೊತ್ತಿದ್ದರೂ ಆಸ್ಪತ್ರೆ ವೈದ್ಯರು ಮತ್ತು ನರ್ಸ್‌ಗಳು ದುಡ್ಡಿನ ಆಸೆಗಾಗಿ ಹೆಣ್ಣು ಮಗುವೆಂದು ಸುಳ್ಳು ಹೇಳಿ ಹಣ ಪಡೆದು ಗರ್ಭಪಾತ ಮಾಡಿಸಿದ್ದಾರೆ. ನ್ಯಾಯ ದೊರಕಿಸಿಕೊಡಿ’ ಎಂದು ಮನವಿ ಮಾಡಿದ್ದಾರೆ. ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

‘ಆಸ್ಪತ್ರೆಯಲ್ಲಿ ಲೋಪ ಕಂಡುಬಂದಿದೆ’

ಆಸ್ಪತ್ರೆಯ ದಾಖಲೆ ಪರಿಶೀಲಿಸಿದ್ದು ಲೋಪ ಕಂಡುಬಂದಿವೆ. ಸ್ಕ್ಯಾನಿಂಗ್ ವಿಭಾಗದಲ್ಲಿ ಸರಿಯಾಗಿ ದಾಖಲೆ ನಿರ್ವಹಣೆ ಮಾಡಿಲ್ಲ. ಸಿಸಿಟಿವಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ. ಯಂತ್ರಗಳನ್ನು ವಶಕ್ಕೆ ಪಡೆದು ಸ್ಕ್ಯಾನಿಂಗ್ ವಿಭಾಗ ಸೀಲ್ ಮಾಡಿದ್ದೇವೆ. ಮಾತ್ರೆ ಕೊಟ್ಟು ಹೆಣ್ಣು ಮಗುವನ್ನು ಗಂಡು ಮಗುವನ್ನಾಗಿ ಮಾಡುವುದಾಗಿ ವೈದ್ಯರು ಹೇಳಿದ್ದರು ಎಂದು ಸಂತ್ರಸ್ತರು ದೂರು ನೀಡಿದ್ದಾರೆ. ಅದಕ್ಕೆ ಯಾವುದೇ ದಾಖಲೆ ಪುರಾವೆ ಇಲ್ಲ. ಯಾವ ಮಾತ್ರೆ ಕೊಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಹಿಂದೆ ಏನಾದರೂ ಈ ರೀತಿ ನಡೆದಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಆಸ್ಪತ್ರೆಗೆ ನೋಟಿಸ್ ನೀಡಿದ್ದು ತನಿಖೆ ನಡೆಸುತ್ತಿದ್ದೇವೆ ಡಾ.ಜಗದೀಶ್ ಜಿಲ್ಲಾ ಆರೋಗ್ಯಾಧಿಕಾರಿ ಕೋಲಾರ

ಸುಳ್ಳು ಆರೋಪ:

ವೈದ್ಯರು ‘ದಂಪತಿ ಸುಳ್ಳು ಹೇಳುತ್ತಿದ್ದಾರೆ. ನಾವು ಯಾವುದೇ ಸ್ಕ್ಯಾನಿಂಗ್ ಆಗಲಿ ಚಿಕಿತ್ಸೆಯಾಗಲಿ ನೀಡಿಲ್ಲ. ಈ ಸಂಬಂಧ ದಾಖಲೆಗಳಿದ್ದರೆ ತೋರಿಸಲಿ. ಆರೋಗ್ಯ ಇಲಾಖೆಯವರು ಭೇಟಿ ನೀಡಿ ಅವರ ಕೆಲಸ ಮಾಡಿದ್ದಾರೆ’ ಎಂದು ಸಂಜನಾ ಆಸ್ಪತ್ರೆಯ ಡಾ.ಮೋಹನ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.