ಕೋಲಾರ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯಾದ್ಯಂತ ಶಾಲಾ ಮಕ್ಕಳ ವಾಹನಗಳ ಸುರಕ್ಷತೆಯ ಬಗ್ಗೆ ಗುರುವಾರ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನಿರ್ದೇಶನದ ಮೇರೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಾಲೆಗಳಿಗೆ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಹಲವು ಸೂಚನೆ ನೀಡಿದರು.

ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಆಡಳಿತ ವರ್ಗವು ಮಕ್ಕಳ ಪೋಷಕರೊಂದಿಗೆ ಆಗಾಗ್ಗೆ ಸಭೆ ನಡೆಸಿ ಅವರಿಗೆ ತಿಳಿವಳಿಕೆ ನೀಡಬೇಕು. ಅಲ್ಲದೆ, ಮಕ್ಕಳ ಸುರಕ್ಷತೆ ಬಗ್ಗೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಮಕ್ಕಳನ್ನು ವಾಹನಗಳಿಗೆ ಹತ್ತಿಸುವ ಹಾಗೂ ಇಳಿಸಲು ಪ್ರತಿ ಶಾಲಾ ವಾಹನಕ್ಕೆ ಸಹಾಯಕರೊಬ್ಬರನ್ನು ನೇಮಿಸಿ ಮಕ್ಕಳನ್ನು ಸುರಕ್ಷಿತವಾಗಿ ವಾಹನ ಹತ್ತಿಸುವ ಮತ್ತು ಇಳಿಸುವ ಜವಾಬ್ದಾರಿಯನ್ನು ನೀಡಬೇಕು ಎಂದರು.

ಶಾಲೆ ಇರುವ ಪ್ರದೇಶಗಳಲ್ಲಿ ಶಾಲಾ ವಲಯ, ವೇಗದ ಮಿತಿ ಇತ್ಯಾದಿ ಚಿಹ್ನೆ ಇರುವ ಫಲಕಗಳನ್ನು ಪ್ರದರ್ಶಿಸಬೇಕು. ಶಾಲಾ ವಾಹನಗಳು 40 ಕಿ.ಮೀ. ವೇಗ ಮೀರದಂತೆ ವೇಗ ನಿಯಂತ್ರಕ (ಸ್ಪೀಡ್ ಬ್ರೇಕರ್) ಅಳವಡಿಸಬೇಕು ಎಂದು ತಾಕೀತು ಮಾಡಿದರು.

ಮಕ್ಕಳಿಗೆ ಅನುಗುಣವಾಗಿ ವಾಹನ ಸಾಮರ್ಥ್ಯ ಇರಬೇಕು. ವಾಹನದ ಒಳಗೆ ಮಕ್ಕಳು ನಿಲ್ಲಬಾರದು. ಎಲ್ಲಾ ಮಕ್ಕಳಿಗೆ ಆಸನದ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಚಾಲಕರನ್ನು ನೇಮಕ ಮಾಡುವ ಮುನ್ನ ಪೊಲೀಸ್ ಇಲಾಖೆಯಿಂದ ಅವರ ಗುಣ ಮತ್ತು ನಡತೆಯ ಪ್ರಮಾಣ ಪತ್ರ ಹೊಂದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಚಾಲಕರಿಗೆ ವಾಹನ ಚಾಲನಾ ಪರವಾನಗಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ವಾಹನದ ಗಾಜಿನ ಮೇಲೆ ಯಾವುದೇ ಟಿಂಡೆಂಟ್ ಅಥವಾ ಕಲರ್ ಅಳವಡಿಸಬಾರದು. ಗಾಜುಗಳು ಪಾರದರ್ಶಕವಾಗಿರಬೇಕು. ಶಾಲಾ ವಾಹನಗಳಲ್ಲಿ ಮಕ್ಕಳಿಗೆ ಶಾಲಾ ಬ್ಯಾಗ್ಗಳನ್ನಿಡಲು ಸಾಕಷ್ಟು ಸ್ಥಳ ಮೀಸಲಿಡಬೇಕು. ಶಾಲಾ ವಾಹನಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತು ಜಿಪಿಎಸ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಹಾಗೂ ಚಾಲಕನ ನಡತೆಯ ಬಗ್ಗೆ ತಿಳಿಯಬಹುದಾಗಿರುತ್ತದೆ ಎಂದರು.

ಶಾಲಾ ಮಕ್ಕಳು ವಾಹನದಲ್ಲಿ ಕುಳಿತುಕೊಂಡಾಗ ಶಿಸ್ತಿನಿಂದ ಇರುವಂತೆ ಹಾಗೂ ತಮ್ಮ ಕೈಗಳನ್ನು ಹಾಗೂ ತಲೆಯನ್ನು ವಾಹನದಿಂದ ಹೊರಗೆ ಚಾಚದಂತೆ ತಿಳಿವಳಿಕೆ ನೀಡಬೇಕು ಎನ್ನುವ ಕ್ರಮಗಳ ಕುರಿತು ತಿಳಿಸಿಕೊಟ್ಟರು.

Highlights - ಆಟೊದಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸುವಂತಿಲ್ಲ 40 ಕಿ.ಮೀ. ವೇಗ ಮೀರದಂತೆ ಸ್ವೀಡ್ ಬ್ರೇಕರ್ ಅಳವಡಿಸಿ ಎಲ್ಲಾ ಮಕ್ಕಳಿಗೆ ಆಸನದ ವ್ಯವಸ್ಥೆ ಇರಬೇಕು

Cut-off box - ಆಟೊ; ಎಲ್ಪಿಜಿ ಟ್ಯಾಂಕ್ ಮೇಲೆ ಕೂರಿಸಬೇಡಿ ಐದಕ್ಕಿಂತ ಹೆಚ್ಚು ಮಕ್ಕಳಿರುವ ಆಟೊಗಳಲ್ಲಿ ಪೋಷಕರನ್ನು ತಮ್ಮ ಮಕ್ಕಳನ್ನು ಕಳುಹಿಸಬಾರದು ಎಂದು ಪೊಲೀಸರು ಪೋಷಕರಿಗೆ ತಿಳಿವಳಿಕೆ ನೀಡಿದರು. ಮಕ್ಕಳನ್ನು ಆಟೊದಲ್ಲಿ ಎಲ್ಪಿಜಿ ಟ್ಯಾಂಕ್ ಮೇಲೆ ಕೂರಿಸುವ ಯಾವುದೇ ವ್ಯವಸ್ಥೆ ಮಾಡಿದ್ದಲ್ಲಿ ಅಂತಹ ವಿಚಾರವನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ವಾಹನದಲ್ಲಿ ಎಲ್ಪಿಜಿ ಕಿಟ್ ಅಳವಡಿಸಿದ್ದಲ್ಲಿ ಅದು ಅಂಗೀಕೃತ ಪ್ರಾಧಿಕಾರದಿಂದ ಪ್ರಮಾಣೀಕರಿಸಿರಬೇಕು. ಇದನ್ನು ಪೋಷಕರು ಪರಿಶೀಲಿಸಬೇಕು ಎಂದರು.

Cut-off box - ವಾಹನ ಫಿಟ್ನೆಸ್ ಸರ್ಟಿಫಿಕೇಟ್ ಇರಬೇಕು ಶಾಲಾ ವಾಹನಗಳಿಗೆ ನೋಂದಣಿ ಪ್ರಮಾಣ ಪತ್ರ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿರಬೇಕು. ವಾಹನ ನೋಂದಣಿಯಾದ ದಿನಾಂಕದಿಂದ 15 ವರ್ಷದ ಅವಧಿ ಮೀರದೆ ಇರುವ ವಾಹನಗಳನ್ನು ಮಾತ್ರ ಉಪಯೋಗಿಸಬೇಕು. ಆಗಿಂದಾಗ್ಗೆ ವಾಹನದ ಸುಸ್ಥಿತಿಯ ಬಗ್ಗೆ ಗಮನಹರಿಸಬೇಕು ಎಂದು ಪೊಲೀಸರು ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.