ಮಾಲೂರು: ಶುದ್ಧ ಕುಡಿಯುವ ನೀರಿನ ಸಮಸ್ಯೆ, ಚರಂಡಿ ವ್ಯವಸ್ಥೆ ಇಲ್ಲ, ಸ್ವಚ್ಛತೆ ಮರೀಚಿಕೆ.. ಇದು ಮಿರಪನಹಳ್ಳಿ ಗ್ರಾಮದ ಕಾಲೊನಿ ದುಸ್ಥಿತಿ.

ತಾಲ್ಲೂಕಿನ ಬಾಳಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿರಪನಹಳ್ಳಿ ಗ್ರಾಮದಲ್ಲಿ ಸುಮಾರು 120 ಕುಟುಂಬಗಳಿದ್ದು, 410 ಮತದಾರರಿದ್ದಾರೆ. ಆದರೆ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕುಡಿಯುವ ನೀರಿಗಾಗಿ ಪಕ್ಕದ ಗ್ರಾಮದ ಮೇಲೆ ಆಧಾರವಾಗಿದ್ದಾರೆ. ಇನ್ನೂ ಕೊಳಚೆ ನೀರು ಹರಿಯಲು ಕಾಲೊನಿಯಲ್ಲಿ ಚರಂಡಿ ಇಲ್ಲದೆ ಮನೆಗಳ ಮುಂದೆಯೇ ಕೊಳಚೆ ನೀರು ಹರಿಯುವಂತಾಗಿದೆ. ಮಕ್ಕಳಿಗೆ ಅದು ಕೊಳಚೆ ನೀರು ಎಂಬ ಅರಿವಿಲ್ಲದೆ ಅದರಲ್ಲೇ ಆಟವಾಡುತ್ತಿರುತ್ತಾರೆ.

ಮಿರಪನಹಳ್ಳಿ ಗ್ರಾಮದ ನಿವಾಸಿಗಳಿಗೆ ಪಂಚಾಯಿತಿ ವತಿಯಿಂದ ಕೊಳವೆಬಾವಿ ನೀರನ್ನು ಎರಡ್ಮೂರು ದಿನಕ್ಕೆ ಒಮ್ಮೆ ನಲ್ಲಿ ಮೂಲಕ ಸರಬರಾಜು ಮಾಡಲಾಗುತ್ತಿದೆ. ಆದರೆ, ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದೆ ಕುಡಿಯುವ ನೀರಿಗಾಗಿ ಮೂರು ಕಿ.ಮೀ ದೂರದ ಮಾಸ್ತಿಗೆ ತೆರಳಬೇಕಾಗಿದೆ. ಬೈಕ್ ಇರುವವರು ಶುದ್ಧ ಕುಡಿಯುವ ನೀರನ್ನು ತಂದು ಕುಡಿದರೆ, ಬೈಕ್ ಇಲ್ಲದವರು ಕೊಳವೆಬಾವಿ ನೀರನ್ನೇ ಕುಡಿಯುವಂತಾಗಿದೆ.

ಕಾಲೊನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮನೆ ಮುಂಭಾಗವೇ ಕೊಳಚೆ ನೀರು ಹರಿಯುತ್ತದೆ. ಇಷ್ಟೇ ಅಲ್ಲದೆ ಮನೆಗಳ ಬಳಿಯೇ ತಿಪ್ಪೆಗಳ ರಾಶಿ ಎದ್ದು ಕಾಣುತ್ತಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹಾಗಾಗಿ ಪಂಚಾಯಿತಿ ವತಿಯಿಂದ ಕಾಲೊನಿಗೆ ಕುಡಿಯುವ ನೀರು, ಚರಂಡಿ ನಿರ್ಮಾಣ ಮಾಡಿಕೊಡಬೇಕೆಂದು ಕಾಲೊನಿ ನಿವಾಸಿಗಳು ಒತ್ತಾಯಿಸಿದ್ದಾರೆ.

ಸೊಳ್ಳೆಕಾಟ ಹೆಚ್ಚಳ

ಈ ಕಾಲೊನಿಯಲ್ಲಿ ನಮ್ಮ ತಾತನ ಕಾಲದಿಂದ ಜೀವನ ನಡೆಸುತ್ತಿದ್ದೇವೆ. ಇಲ್ಲಿಯವರೆಗೂ ಚರಂಡಿ ಮಾಡಿಲ್ಲ. ಇದರಿಂದ ಮನೆ ಮುಂದೆಯೇ ಚರಂಡಿ ನೀರು ಹರಿಯುತ್ತದೆ. ಇದರಿಂದ ಸೊಳ್ಳೆಕಾಟ ಹೆಚ್ಚಾಗಿದ್ದು ಮಕ್ಕಳು ಜ್ವರದಿಂದ ನರಳುತ್ತಿದ್ದಾರೆ.

-ವೆಂಕಟೇಶಪ್ಪ ಕಾಲೊನಿ ನಿವಾಸಿ

ಚರಂಡಿ ನಿರ್ಮಾಣ ಮಾಡಲಾಗುವುದು ಮಿರಪನಹಳ್ಳಿ ಗ್ರಾಮದ ಕಾಲೊನಿಯಲ್ಲಿ ಚರಂಡಿ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಜಮೀನಿನ ವಿವಾದ ಇರುವುದರಿಂದ ಚರಂಡಿ ನಿರ್ಮಾಣಕ್ಕೆ ಅಡ್ಡಿಯಾಗಿದೆ. ನಿವಾರಣೆ ಮಾಡಿಕೊಟ್ಟರೆ ಪಂಚಾಯತಿ ವತಿಯಿಂದ ಚರಂಡಿ ನಿರ್ಮಾಣ ಮಾಡಿಕೊಡಲಾಗುವುದು.

- ಶಂಕರ್ ಬಾಳಿಗಾನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.