ಕೋಲಾರ: ನಟ ದರ್ಶನ್ರ ಬಹು ನಿರೀಕ್ಷಿತ ‘ರಾಬರ್ಟ್’ ಸಿನಿಮಾವನ್ನು ನಗರದ ಭವಾನಿ ಚಿತ್ರಮಂದಿರದಲ್ಲಿ ಗುರುವಾರ ತಡವಾಗಿ ಪ್ರದರ್ಶಿಸಿದ್ದರಿಂದ ಆಕ್ರೋಶಗೊಂಡ ಅಭಿಮಾನಿಗಳು ಚಿತ್ರಮಂದಿರದ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.

ರಾಬರ್ಟ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಬೆಳಗಿನ ಜಾವವೇ ಚಿತ್ರಮಂದಿರದ ಬಳಿ ಜಮಾಯಿಸಿದ್ದರು. ಬೆಳಿಗ್ಗೆ 6 ಗಂಟೆಗೆ ಸಿನಿಮಾದ ಮೊದಲ ಪ್ರದರ್ಶನ ನಿಗದಿಯಾಗಿತ್ತು. ಅಭಿಮಾನಿಗಳು ಸುಮಾರು 2 ತಾಸು ಕಾದರೂ ಪ್ರದರ್ಶನ ಆರಂಭವಾಗಲಿಲ್ಲ.

ಇದರಿಂದ ಅಸಮಾಧಾನಗೊಂಡ ಅಭಿಮಾನಿಗಳು ಚಿತ್ರಮಂದಿರದ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು. ಪರಿಸ್ಥಿತಿ ವಿಕೋಪಕ್ಕ ತಿರುಗಿ ಅಭಿಮಾನಿಗಳು ಮತ್ತು ಚಿತ್ರಮಂದಿರದ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಚಿತ್ರಮಂದಿರದ ಮಾಲೀಕರ ಮನವೊಲಿಕೆ ಪ್ರಯತ್ನಕ್ಕೂ ಜಗ್ಗದ ಅಭಿಮಾನಿಗಳು ಚಿತ್ರಮಂದಿರದ ಗೇಟ್ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

‘ನಸುಕಿನಲ್ಲೇ ಸರದಿ ಸಾಲಿನಲ್ಲಿ ನಿಂತು ₹ 200 ಕೊಟ್ಟು ಟಿಕೆಟ್ ಖರೀದಿಸಿದ್ದೇವೆ. 2 ತಾಸು ಕಾದರೂ ಪ್ರದರ್ಶನ ಆರಂಭಿಸಿಲ್ಲ. ನಾವು ಕೆಲಸಕ್ಕೆ ಹೋಗಬೇಕು. ಪ್ರದರ್ಶನ ಆರಂಭಿಸದಿದ್ದರೆ ಟಿಕೆಟ್ನ ಹಣ ವಾಪಸ್ ಕೊಡಿ’ ಎಂದು ದರ್ಶನ್ ಅಭಿಮಾನಿಗಳು ಪಟ್ಟು ಹಿಡಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಅಭಿಮಾನಿಗಳನ್ನು ಸಮಾಧಾನಪಡಿಸಿದರು. ನಂತರ 8 ಗಂಟೆಗೆ ಸಿನಿಮಾ ಪ್ರದರ್ಶನವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.