ಮುಳಬಾಗಿಲು: ಇಲ್ಲಿನ ಜಹಾಂಗೀರ್ ನಗರ ನಿವಾಸಿ ವಾಹಿದ್ ಪಾಷ ಮಾರ್ಷಲ್ ಆರ್ಟ್ಸ್, ಕರಾಟೆ ಹಾಗೂ ಬೋಸ್ಟಾಫ್ ಸ್ಟಿಕ್ ಕ್ರೀಡೆಗಳಲ್ಲಿ 11 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಾಧನೆಗಳ ಶಿಖರ ಏರುತ್ತಿದ್ದಾರೆ.

ಇವರು ಓದಿದ್ದು ಪಿಯುಸಿ. ಮೊದಲಿನಿಂದಲೂ ದೊಡ್ಡ ಕ್ರೀಡಾಪಟುವಾಗಬೇಕು ಎಂಬ ಇಚ್ಛೆಯಿಂದ ತಮಗಿಷ್ಟವಾದ ಕ್ರೀಡೆಗಳಲ್ಲಿ ಭಾಗವಹಿಸಿ ಬಂಗಾರದ ಪದಕಗಳನ್ನು ಪಡೆಯುತ್ತಿದ್ದಾರೆ. ಈ ಮೂಲಕ ಭಾರತೀಯ ಕ್ರೀಡೆಯಲ್ಲಿ ಮಿನುಗು ತಾರೆಯಾಗುವ ಭರವಸೆ ಮೂಡಿಸುತ್ತಿದ್ದಾರೆ.

ಕ್ರೀಡಾ ಸಾಧಕ ವಾಹಿದ್ ಪಾಷ ಅವರು ಸತತ ಏಳು ವರ್ಷಗಳಿಂದ ತಮ್ಮ ಗುರು ಮೊಹಮ್ಮದ್ ಅಲಿಸ್ ಅವರ ನೆರವಿನಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸುತ್ತಾ ಸಾಧನೆಗಳನ್ನು ಮಾಡಿತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಇವರಿಗೆ ಈವರೆಗೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ. ಇದರಿಂದಾಗಿ ಮಾರ್ಷಲ್ ಆರ್ಟ್ಸ್, ಕರಾಟೆ ಹಾಗೂ ಬೋಸ್ಟಾಫ್ ಸ್ಟಿಕ್ ತರಬೇತಿ ನೀಡುವ ಮೂಲಕ ತಮ್ಮ ಕ್ರೀಡಾ ವೆಚ್ಚಗಳನ್ನು ನಿಭಾಯಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕದ ಪರ ಎರಡು ಬಾರಿ ಹಾಗೂ ಭಾರತದ ಪರ ಎರಡು ಬಾರಿ ಮಾರ್ಷಲ್ ಆರ್ಟ್ಸ್ ಹಾಗೂ ಬೋಸ್ಟಾಫ್ ಸ್ಟಿಕ್ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.

2022ರಲ್ಲಿ ಆಂಧ್ರಪ್ರದೇಶದ ವಿಜಯವಾಡ ಹಾಗೂ ಹೈದರಾಬಾದ್ಗಳಲ್ಲಿ ನಡೆದ ಮಾರ್ಷಲ್ ಆರ್ಟ್ಸ್ ಮತ್ತು ಬೋಸ್ಟಾಫ್ ಸ್ಟಿಕ್ ಸ್ಪರ್ಧೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದರು.

2023ನೇ ಸಾಲಿನಲ್ಲಿ ದುಬೈನಲ್ಲಿ ನಡೆದ 11ನೇ ಮಾರ್ಷಲ್ ಆರ್ಟ್ಸ್ ಮತ್ತು ಸ್ಕ್ಯಾಷ್ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಹಾಗೂ 2023ರಲ್ಲಿ ಇರಾಕ್ನಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಮಾಸ್ಟರ್ ಕಪ್ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಆದಾಗ್ಯೂ, ಕೇಂದ್ರ ಅಥವಾ ರಾಜ್ಯದ ಸರ್ಕಾರಗಳು ಇವರಿಗೆ ಪ್ರೋತ್ಸಾಹ ನೀಡದಿರುವುದು ಬೇಸರದ ಸಂಗತಿ.

ಕರಾಟೆ, ಮಾರ್ಷಲ್ ಆರ್ಟ್ಸ್ ಹಾಗೂ ಬೋಸ್ಟಾಫ್ ಸ್ಟಿಕ್ ವಿಭಾಗದಲ್ಲಿ ತರಬೇತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಉಚಿತ ತರಬೇತಿ ಮತ್ತು ಕೌಶಲಗಳನ್ನು ನೀಡುವ ಆಕಾಂಕ್ಷೆ ಇದೆ. ಆದರೆ, ಯುವಕರು ಕ್ರೀಡೆಯಲ್ಲಿ ಭಾಗಿಯಾಗಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ವಿಷಾದಿಸುತ್ತಾರೆ ಕ್ರೀಡಾಪಟು ವಾಹಿದ್ ಪಾಷ.

ಸರ್ಕಾರದಿಂದ ನೆರವಿನ ನಿರೀಕ್ಷೆ

ಎರಡು ಬಾರಿ ಮಾರ್ಷಲ್ ಆರ್ಟ್ಸ್ ಹಾಗೂ ಬೋಸ್ಟಾಫ್ ಸ್ಟಿಕ್ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದೇನೆ. ಆದರೆ, ನನಗೆ ಭಾರತೀಯ ಕ್ರೀಡಾ ಇಲಾಖೆ ಅಥವಾ ರಾಜ್ಯ ಅಥ್ಲೆಟಿಕ್ ಸಂಸ್ಥೆಯು ತರಬೇತುದಾರರಿಂದ ಯಾವುದೇ ಮಾರ್ಗದರ್ಶನ ಅಥವಾ ತರಬೇತಿ ನೀಡಿಲ್ಲ. ಸರ್ಕಾರಗಳು ಮನಸ್ಸು ಮಾಡಿ ನನಗೆ ಸಹಾಯ ಹಾಗೂ ಪ್ರೋತ್ಸಾಹ ನೀಡಿದರೆ ದೇಶವನ್ನು ಮತ್ತಷ್ಟು ಕಡೆಗಳಲ್ಲಿ ಪ್ರತಿನಿಧಿಸಿ ಪದಕ ಗೆಲ್ಲಬೇಕೆಂಬ ಆಸೆ ಇದೆ.

ವಾಹಿದ್ ಪಾಷ, ಕ್ರೀಡಾಪಟು

ವಾಹಿದ್ ಪಾಷ ಎಲೆ ಮರಿಕಾಯಿಯಂತೆ ಅನೇಕ ಕಡೆಗಳಲ್ಲಿ ನಡೆದ ಕ್ರೀಡೆಗಳಲ್ಲಿ 11 ಚಿನ್ನದ ಪದಕ ಗೆದ್ದಿದ್ದಾರೆ. ಇಷ್ಟು ಪದಕ ಪಡೆದ ಅವರಿಗೆ ಸರ್ಕಾರಗಳಿಂದಾಗಲಿ ಅಥವಾ ಸಮಾಜ ಸೇವಕರಿಂದಾಗಲೀ ನೆರವು ಮಾತ್ರ ಸಿಕ್ಕಿಲ್ಲ. ಸರ್ಕಾರಗಳು ಕೂಡಲೇ ಕ್ರೀಡಾ ಸಾಧಕ ವಾಹಿದ್ ಪಾಷರನ್ನು ಗುರುತಿಸಿ ಸಹಾಯ ಹಾಗೂ ಉತ್ತಮ ತರಬೇತಿ ನೀಡಬೇಕು.

-ಮೊಹಮ್ಮದ್, ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.