ಬೆಂಗಳೂರಿನ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಪ್ರಸ್ತಾವನೆ l ಸ್ಥಳೀಯರ ತೀವ್ರ ವಿರೋಧ
ಕೃಷ್ಣಮೂರ್ತಿ
Published : 26 ಆಗಸ್ಟ್ 2024, 6:56 IST
Last Updated : 26 ಆಗಸ್ಟ್ 2024, 6:56 IST
ಫಾಲೋ ಮಾಡಿ
Comments
ಬಿಜಿಎಂಎಲ್
ಕೆಜಿಎಫ್ ಬಳಿ ಕೈಗಾರಿಕೆಗೆ ಮೀಸಲಾದ ಪ್ರದೇಶ
ಕೃಷ್ಣಮೃಗ ಸಂತತಿಗೆ ಹಾನಿ
ಬೆಂಗಳೂರು ಕಸವನ್ನು ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ವೀಕ್ಷಣೆ ಮಾಡಿರುವ ಸ್ಥಳದ ವ್ಯಾಪ್ತಿಯಲ್ಲಿ ನೂರಾರು ಕೃಷ್ಣಮೃಗಗಳಿವೆ. ಈ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವುದರಿಂದ ಅವುಗಳ ಇಚ್ಛೆಗೆ ಅನುಸಾರವಾಗಿ ಜೀವಿಸುತ್ತಿರುವ ಕೃಷ್ಣಮೃಗಗಳ ಆವಾಸ ಸ್ಥಾನಕ್ಕೆ ಸಮಸ್ಯೆಯಾಗಲಿದ್ದು ಅವುಗಳ ವಾಸಸ್ಥಾನವು ಪಲ್ಲಟವಾಗುವ ಭೀತಿ ಎದುರಾಗಿದೆ. ಅಲ್ಲದೆ ಅವುಗಳು ಬೆಳೆ ಬೆಳೆದ ಜಮೀನುಗಳಿಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಸೂಚನೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಬಿಬಿಎಂಪಿ ಕಸ ವಿಲೇವಾರಿಗೆ ಸೂಕ್ತ ಜಾಗ ಹುಡುಕಲು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು. ಅದರಂತೆ ಕೆಜಿಎಫ್ ಬಳಿಯ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಬಳಿ ಇರುವ 100 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಅನುಷ್ಠಾನ ಕಷ್ಟ ಬಿಜಿಎಂಎಲ್‌ಗೆ ಬಹುತೇಕ ಜಾಗವನ್ನು ರಾಜ್ಯ ಸರ್ಕಾರ ಗುತ್ತಿಗೆ ಆಧಾರದ ಮೇಲೆ ನೀಡಿದೆ. ಆದರೆ ಈಗ ಗುರುತಿಸಿದ ಜಾಗವು ಬಿಜಿಎಂಎಲ್ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಿದ್ದಾಗಿದೆ. ಕಸ ವಿಲೇವಾರಿ ಘಟಕ ಸ್ಥಾಪನೆ ಯೋಜನೆ ಯೋಜನೆ ಅನುಷ್ಠಾನಗೊಳ್ಳಲು ಗುರುತಿಸಲಾದ ಜಾಗವನ್ನು ಬಿಜಿಎಂಎಲ್‌ನಿಂದ ಬಿಬಿಎಂಪಿ ಖರೀದಿಸಬೇಕಿದೆ. ಈಗಾಗಲೇ ಸಂಸದ ಮಲ್ಲೇಶಬಾಬು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ಈ ಯೋಜನೆ ಅನುಷ್ಠ ಕಷ್ಟಸಾಧ್ಯ ಎನ್ನಲಾಗಿದೆ.