ಕುಷ್ಟಗಿ: ಉಪಾಹಾರವನ್ನು ಉದ್ರಿ ರೂಪದಲ್ಲಿ ನಿತ್ಯವೂ ಕೊಡದ ಕಾರಣಕ್ಕೆ ಸಿಟ್ಟಿಗೆದ್ದು ವ್ಯಕ್ತಿಯೊಬ್ಬ ಸೋಮವಾರ ಸಂಜೆ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ಶೇಖರಗೌಡ ಪೊಲೀಸ್ಪಾಟೀಲ (50) ಎಂಬ ಹೋಟೆಲ್ ಮಾಲೀಕನನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಕೊಲೆ ಆರೋಪಿ ವೆಂಕಟೇಶ ಚಿಗರಿ ಮತ್ತು ಕೃತ್ಯಕ್ಕೆ ಪ್ರಚೋದಿಸಿದ ಲಕ್ಷ್ಮವ್ವ ಚಿಗರಿ ಎಂಬುವರನ್ನು ಬಂಧಿಸಲಾಗಿದೆ. ನಿತ್ಯವೂ ಉಪಾಹಾರವನ್ನು ಉದ್ರಿ ರೂಪದಲ್ಲಿ ಕೊಡಲು ವೆಂಕಟೇಶ, ಶೇಖರಗೌಡಗೆ ಬೆದರಿಕೆ ಹಾಕುತ್ತಿದ್ದ. ಸೋಮವಾರ ಸಂಜೆ ಮತ್ತೆ ಜಗಳವಾಗಿ, ವೆಂಕಟೇಶ ಹಲ್ಲೆ ಮಾಡಿದ. ತೀವ್ರವಾಗಿ ಗಾಯಗೊಂಡ ಶೇಖರಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟರು’ ಎಂದು ತಾವರಗೇರಾ ಠಾಣೆ ಪೊಲೀಸರು ತಿಳಿಸಿದ್ದಾರೆ.

ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ಎಚ್.ಶೇಖರಪ್ಪ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಎನ್.ಅರ್.ನಿಂಗಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.