ಮಂಡ್ಯ: ಪುಲ್ವಾಮಾ ದಾಳಿಯ ಹುತಾತ್ಮ ಯೋಧ ಎಚ್.ಗುರು ಅವರ ಜನ್ಮದಿನದ ಅಂಗವಾಗಿ ಸೋಮವಾರ ಮಮತೆಯ ಮಡಿಲು ನಿತ್ಯ ದಾಸೋಹ ಸದಸ್ಯರು ನಗರದ ಜಿಲ್ಲಾಸ್ಪತ್ರೆಯ ಹೊರರೋಗಿಗಳಿಗೆ ಊಟ ಹಾಗೂ ಗಂಜಿ ವಿತರಣೆ ಮಾಡಿದರು.

ಮಮತೆಯ ಮಡಿಲು ಅಧ್ಯಕ್ಷ ಮಂಗಲ ಯೋಗೀಶ್ ಮಾತನಾಡಿ ‘ದೇಶಕ್ಕೆ ಪ್ರಾಣಾರ್ಪಣೆ ಮಾಡಿದ ಎಚ್.ಗುರು ಅವರ ಸೇವೆ ಸ್ಮರಣೀಯವಾದುದು. ಅವರು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರು ಒಬ್ಬ ಯೋಧನಾಗಿ ಸಲ್ಲಿಸಿರುವ ಸೇವೆ ಯುವಜನರಿಗೆ ಸ್ಫೂರ್ತಿಯಾಗಿದೆ. ಮಂಡ್ಯದ ಯುವಕರು ಸೇನೆಗೆ ಸೇರುವುದು ಬಹಳ ಕಡಿಮೆ. ಮುಂದಿನ ದಿನಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆ ಹೆಚ್ಚಳವಾಗಬೇಕು’ ಎಂದರು.

ರಕ್ತದಾನ ಮಾಡಿದ ರಕ್ತದಾನಿಗಳಿಗೆ ಸಸಿ ವಿತರಣೆ ಮಾಡಲಾಯಿತು. ಯೋಧನ ಸಹೋದರ ಮಧು, ಸಂಬಂಧಿಕರಾದ ಎಂ.ರಾಜೇಶ್, ಸ್ವಾಮಿ, ಅರುಣ್, ಕೆ.ಪಿ. ಅರುಣಕುಮಾರಿ, ರವಿ ಮಂಗಲ, ಬಸವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.