ಪಾಂಡವಪುರ: ಪ್ರತಿ ಗ್ರಾಮದಲ್ಲೂ ಸಣ್ಣಪುಟ್ಟ ರಾಜಕಾರಣ ಇದ್ದೇ ಇರುತ್ತದೆ. ಈ ರಾಜಕೀಯ ಬಿಟ್ಟು ಒಗ್ಗಟ್ಟಾದರೆ ಸಮಗ್ರ ಅಭಿವೃದ್ಧಿಯ ಜತೆಗೆ ಶಾಂತಿ, ನೆಮ್ಮದಿ ಕಾಣಬಹುದು ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ತಾಲ್ಲೂಕಿನ ನರಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಗ್ರಾಮಗಳಲ್ಲಿ ಒಂದಿಷ್ಟು ಹಣ ಎಲ್ಲರಲ್ಲಿ ಹರಿದಾಡುತ್ತಿದೆಯೇ ಹೊರತು ಗ್ರಾಮ ಸಂಸ್ಕೃತಿ, ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ ಕಾಣೆಯಾಗಿವೆ ಎಂದರು.

ಗ್ರಂಥಾಲಯ ಅಗತ್ಯ: ಗ್ರಾಮಗಳಲ್ಲಿ ಗ್ರಂಥಾಲಯ ನಿರ್ಮಿಸಿದರೆ ಜನ ಜ್ಞಾನಾ ರ್ಜನೆ ಹೆಚ್ಚಿಸಿಕೊಂಡು ಸಾಂಸ್ಕೃತಿಕ ಗ್ರಾಮವನ್ನಾಗಿ ರೂಪಿಸಬಹುದು. ಪುಸ್ತಕ ಓದುವ ಹವ್ಯಾಸದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ವಿಧಾನಸೌಧ ಮೆಟ್ಟಿಲೇರುವುದಿಲ್ಲ: ವಿಧಾನಸೌಧದಲ್ಲಿ ನನಗೆ ಹಲವು ಸಚಿವರು, ಶಾಸಕರ ಪರಿಚಯವಿದೆ. ಆದರೆ, ನಾನು ಯಾರಿಗೂ ಈ ಕೆಲಸ ಮಾಡಿಕೊಡಿ ಎಂದು ಕೇಳುವುದಿಲ್ಲ. ನನಗೆ ಸಂಕೋಚವಿರುವುದರಿಂದ ಯಾರನ್ನೂ ಭೇಟಿ ಮಾಡುವುದಿಲ್ಲ. ಹಾಗಾಗಿ ಸ್ಥಳೀಯ ಶಾಸಕ ಸಿ.ಎಸ್.ಪುಟ್ಟರಾಜು ಅವರಲ್ಲಿ ಮನವಿ ಮಾಡಿ, ನನ್ನ ಹುಟ್ಟೂರು ನರಹಳ್ಳಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಿ ಎಂದು ಕೇಳಿಕೊಂಡಿದ್ದೇನೆ. ಮನವಿಗೆ ಶಾಸಕರು ಸಕರಾತ್ಮಕವಾಗಿ ಸ್ಪಂದಿಸಿರುವುದು ಖುಷಿ ತಂದುಕೊಟ್ಟಿದೆ ಎಂದು ಹೇಳಿದರು.

ಶಾಸಕ ಸಿ.ಎಸ್.ಪುಟ್ಟರಾಜು, ನರಹಳ್ಳಿ ಗ್ರಾಮದ ಅಭಿವೃದ್ಧಿಗೆ ಬದ್ಧ. ಈಗಾಗಲೇ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಹಾಗೂ ಅವರ ಕಂದಾಯ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಹಲವು ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಿಂದ ₹ 37ಲಕ್ಷ ಅನುದಾನದಲ್ಲಿ ಚಿಕ್ಕ ಹಾಗೂ ದೊಡ್ಡ ಬಾವಿಯನ್ನು ಅಭಿವೃದ್ಧಿಪಡಿಸಲಾಗುವುದು. ಆರು ತಿಂಗಳಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.

ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಪತ್ನಿ ರಜನಿ, ಶಾಸಕ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ಪುಟ್ಟರಾಜು, ಪುತ್ರಿ ಅನಿತಾ ವಿನಯ್, ಕುಟುಂಬ ವರ್ಗ, ಸುವರ್ಣ ಚನ್ನೇಗೌಡ, ಲಿಖಿತ್ ಗೌಡ, ಇಂಪನ ಅವರು ನರಹಳ್ಳಿ ಗ್ರಾಮದಲ್ಲಿರುವ ಗ್ರಾಮ ದೇವತೆ ಚಿಕ್ಕಮ್ಮ ತಾಯಮ್ಮ ದೇವಿಯ ನೂತನ ದೇವಸ್ಥಾನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು. ಜತೆಗೆ ಡೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ತ್ಯಾಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ರಾಮೇಗೌಡ, ಹಳೇಬೀಡು ಗ್ರಾ.ಪಂ.ಅಧ್ಯಕ್ಷೆ ಸೌಭಾಗ್ಯ, ಮನ್‌ಮುಲ್ ನಿರ್ದೇಶಕ ಕೆ.ರಾಮಚಂದ್ರು, ವಿಎಸ್‌ಎಸ್‌ಎನ್ ಅಧ್ಯಕ್ಷ ಶಿವಶಂಕರ್, ಟಿಎಪಿಸಿಎಂಎಸ್ ಸದಸ್ಯ ಬೆಟ್ಟಸ್ವಾಮಿಗೌಡ, ಡೇರಿ ಅಧ್ಯಕ್ಷೆ ನಾಗರತ್ನಮ್ಮ, ಎಇಇ ಆದರ್ಶ, ತಾ.ಪಂ. ಇಒ ಆರ್.ಪಿ.ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.