ಮದ್ದೂರು: 'ಪಟ್ಟಣದಲ್ಲಿರುವ ಪ್ರವಾಸಿ ಮಂದಿರವನ್ನು ಮೇಲ್ದರ್ಜೆಗೇರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಶಾಸಕ ಕೆ.ಎಂ ಉದಯ್ ತಿಳಿಸಿದರು.

ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಶನಿವಾರ ಸರ್ಕಾರದ ಮುಖ್ಯ ವಾಸ್ತು ಶಿಲ್ಪಿಗಳು ಬಂದು ಕೈಗೊಳ್ಳಬೇಕಾಗಿರುವ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚಿಸಿದ ನಂತರ ಈ ಬಗ್ಗೆ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪಟ್ಟಣದ ಪ್ರವಾಸಿ ಮಂದಿರವು ಮೈಸೂರು– ಬೆಂಗಳೂರು ಹೆದ್ದಾರಿಯ ನಡುವೆ ಇರುವುದರಿಂದ ಹಲವಾರು ಗಣ್ಯರು ಆಗಮಿಸುತ್ತಾರೆ. ಆದರೆ ಒಂದು ಕಟ್ಟಡವನ್ನು ಹೊರತುಪಡಿಸಿದರೆ ಉಳಿದ ಕಟ್ಟಡಗಳು ಹಳೆಯದಾಗಿರುವುದರಿಂದ ಅವುಗಳ ಜಾಗದಲ್ಲಿ ನೂತನವಾದ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು, ಆ ಸಲುವಾಗಿಯೇ ಈ ಬಗ್ಗೆ ನೀಲನಕ್ಷೆಯನ್ನು ಹಾಗೂ ಅಂದಾಜು ಪಟ್ಟಿಯನ್ನು ತಯಾರಿಸಿ ಬಳಿಕ ಇತರೆ ಸಿದ್ಧತೆಯನ್ನು ಕೈಗೊಳ್ಳಲು ಅಧಿಕಾರಿಗಳು ಬಂದಿದ್ದಾರೆ’ ಎಂದರು.

ಈ ವೇಳೆ ಲೋಕೋಪಯೋಗಿ ಮುಖ್ಯ ವಾಸ್ತು ಶಿಲ್ಪಿಗಳಾದ ರಾಮಸ್ವಾಮಿ, ಶ್ರೀಧರ್, ಲೋಕೋಪಯೋಗಿ ಇಲಾಖೆಯ ಎಇ ಹರ್ಷ, ಎಇಇ ದೇವಾನಂದ್, ಉಪ ವಾಸ್ತು ಶಿಲ್ಪಿ ರಾಜೇಶ್ವರಿ , ಮುಖಂಡರಾದ ತಿಮ್ಮೆಗೌಡ, ಕೊಕ್ಕರೆ ಶಿವು, ಯರಗನಹಳ್ಳಿ ಹರೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.