ಎಚ್.ಡಿ. ಕೋಟೆ: ದೇಶದಲ್ಲಿ ಶೇ 28ರಷ್ಟು ವಿದ್ಯಾರ್ಥಿಗಳು ಮಾತ್ರ ಸ್ನಾತಕ್ಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ ಎಂದು ಮೈಸೂರಿನ ಮಾನಸ ಗಂಗೋತ್ರಿ ಅರ್ಥಶಾಸ್ತ್ರ ಮುಖ್ಯಸ್ಥೆ ನಮಿತಾ ತಿಮ್ಮಯ್ಯ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಮತ್ತು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ, ಎನ್.ಎಸ್.ಎಸ್ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪೋಷಕರು ಓದಿಸುವ ಶಕ್ತಿ ಇಲ್ಲದೆ ಉದ್ಯೋಗದತ್ತ ಗಮನ ಹರಿಸುವಂತೆ ಒತ್ತಾಯ ಮಾಡುತ್ತಾರೆ ಎಂದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜೆ.ಎನ್. ವೆಂಕಟೇಶ್ ಮಾತನಾಡಿ ಓದಿನ ಜೊತೆಗೆ ಧ್ಯಾನ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಜ್ಞಾನದ ಜೊತೆಗೆ, ಸಂಸ್ಕಾರವನ್ನು ಸಹ ಬೆಳೆಸಿಕೊಳ್ಳಬೇಕು ಎಂದರು.

'ಕಾಲೇಜಿನ ಆಡಳಿತಾಧಿಕಾರಿ ಪ್ರೋ.ಕೆ.ಪಿ. ಬಸವೇಗೌಡ, ಚಂದ್ರೇಗೌಡ, ಕೃಷ್ಣೇಗೌಡ, ಎನ್.ಎಸ್.ಎಸ್. ಸಲಹಾ ಸಮಿತಿ ಸದಸ್ಯ ಎ.ಜೆ.ಕಾಳೇಗೌಡ, ಮೈನಾ, ಶ್ರೀನಿವಾಸ್, ಸಂತೋಷ್, ರಾಜೇಂದ್ರ, ಕಲ್ಲೇಶ್ ಗೌಡ, ಭೈರೇಗೌಡ, ರಾಜೇಶ್, ರಾಮಚಂದ್ರ, ಸಿದ್ದೇಗೌಡ, ರವೀಶ್, ಚನ್ನಕೇಶವನಾಯಕ, ಚಿತ್ರ, ಪ್ರೀತಿ, ಚಂದನ, ಶಾಂಭವಿ, ಚಿಕ್ಕದೇವಿ, ರವಿ, ಸಂಗೀತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.