ಮೈಸೂರು: ಮೈಸೂರು ರಂಗಾಯಣದಿಂದ ಡಿ.10 ರಿಂದ 19ರ ವರೆಗೆ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಆಯೋಜಿಸಲಾಗಿದ್ದು, ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯಲಿದೆ.

‘ಕೋವಿಡ್ ಕಾರಣ ಕಳೆದ ವರ್ಷ ಬಹುರೂಪಿ ನಾಟಕೋತ್ಸವ ಆಯೋಜನೆಯಾಗಿರಲಿಲ್ಲ. ಕೊರೊನಾ ಆತಂಕ ದೂರವಾಗಿದ್ದು, ರಂಗಾಯಣದ ಅವರಣದಲ್ಲಿ ನಾಟಕೋತ್ಸವವನ್ನು ವೈಭವದಿಂದ ನಡೆಸಲು ನಿರ್ಧರಿಸಲಾಗಿದೆ. ಹೊರ ರಾಜ್ಯಗಳ 10 ನಾಟಕಗಳು ಸೇರಿದಂತೆ ಒಟ್ಟು 36 ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿ ‘ತಾಯಿ’ ಎಂಬ ವಿಷಯ ಇಟ್ಟುಕೊಂಡು ನಾಟಕೋತ್ಸವ ನಡೆಯಲಿದೆ. ಇದೇ ವೇಳೆ ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಜಾನಪದ ಕಲಾ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನವೂ ಇರಲಿದೆ’ ಎಂದು ಮಾಹಿತಿ ನೀಡಿದರು.

₹ 75 ಲಕ್ಷ ವೆಚ್ಚ: ‘10 ದಿನಗಳ ನಾಟಕೋತ್ಸವಕ್ಕೆ ಅಂದಾಜು ₹ 75 ಲಕ್ಷ ವೆಚ್ಚವಾಗಲಿದೆ. ಬಹುರೂಪಿಯನ್ನು ಕಳೆದ ವರ್ಷವೇ ‘ಉತ್ಸವ’ಗಳ ಪಟ್ಟಿಗೆ ಸೇರಿಸಿರುವ ಸರ್ಕಾರ, ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇನ್ನುಳಿದ ಮೊತ್ತವನ್ನು ಇತರ ಮೂಲಗಳಿಂದ ಸಂಗ್ರಹಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.