ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಬೆಂಗಳೂರು, ಮೈಸೂರು ಅಥ್ಲೀಟ್‌ಗಳ ಪ್ರಾಬಲ್ಯ

ಸಿ.ಎಂ. ಕಪ್‌ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ
Published : 5 ಅಕ್ಟೋಬರ್ 2024, 23:21 IST
Last Updated : 5 ಅಕ್ಟೋಬರ್ 2024, 23:21 IST
ಫಾಲೋ ಮಾಡಿ
Comments

ಮೈಸೂರು: ಆತಿಥೇಯ ಮೈಸೂರು ವಿಭಾಗದ ಅಥ್ಲೀಟ್‌ಗಳು ಇಲ್ಲಿ ನಡೆದಿರುವ ಸಿ.ಎಂ. ಕಪ್‌ ರಾಜ್ಯಮಟ್ಟದ ದಸರಾ ಕ್ರೀಡಾಕೂಟದ ಮೂರನೇ ದಿನವಾದ ಶನಿವಾರ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕಗಳ ಬೇಟೆಯಾಡಿದರು. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಸ್ಪರ್ಧಿಗಳು ಪಾರಮ್ಯ ಮೆರೆದರು.

ಮಳೆಯಿಂದ ತೋಯ್ದ ಚಾಮುಂಡಿ ವಿಹಾರ ಕ್ರೀಡಾಂಗಣದ ಅಂಕಣದಲ್ಲಿ  ಮೈಸೂರು ವಿಭಾಗದ ಯುವತಿಯರು 5 ಚಿನ್ನ ಹಾಗೂ 2 ಬೆಳ್ಳಿ ಪದಕಗಳೊಂದಿಗೆ ಸಂಭ್ರಮಿಸಿದರು. ಬೆಂಗಳೂರು ನಗರ ವಿಭಾಗದ ಪುರುಷರು 4 ಚಿನ್ನ, 2 ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅವರಿಗೆ ಬೆಳಗಾವಿ ವಿಭಾಗದ ಅಥ್ಲೀಟ್‌ಗಳು ಪೈಪೋಟಿ ಒಡ್ಡಿದರು.

ಫಲಿತಾಂಶ

ಪುರುಷರು:
ಅಥ್ಲೆಟಿಕ್ಸ್‌: 200 ಮೀ. ಓಟ: ಪ್ರಸನ್ನಕುಮಾರ್ ( ಬೆಂಗಳೂರು. ಕಾಲ: 21.56 ಸೆಕೆಂಡ್‌)–1, ಗುರುಪ್ರಸಾದ್ (ಮೈಸೂರು)–2, ವಿನಯ್‌ ( ವಿಜಯಪುರ)–3; 800 ಮೀ. ಓಟ: ಬಿ. ತುಷಾರ್ ( ಬೆಂಗಳೂರು. ಕಾಲ: 1ನಿಮಿಷ, 52.95 ಸೆಕೆಂಡ್‌)–1, ಆಶ್ರಿತ್‌ ( ಶಿವಮೊಗ್ಗ)–2, ಕಲ್ಯಾಣ್ (ಬೆಂಗಳೂರು)–3; 5000 ಮೀ. ಓಟ: ನಾಗರಾಜ್‌ ದಿವಟೆ ( ಧಾರವಾಡ. ಕಾಲ: 15ನಿಮಿಷ, 5.38 ಸೆಕೆಂಡ್)–1, ಗುರುಪ್ರಸಾದ್ ( ಬೆಂಗಳೂರು)–2, ಪುರುಷೋತ್ತಮ್‌ ( ದಕ್ಷಿಣ ಕನ್ನಡ)–3; ಲಾಂಗ್ ಜಂಪ್‌: ಜಫರ್‌ಖಾನ್‌ ( ಬೆಳಗಾವಿ. ಅಂತರ; 7.53 ಮೀಟರ್‌), ಅನುಷ್ (ಚಿಕ್ಕಮಗಳೂರು)–2, ಯಶಸ್‌ ಗೌಡ ( ಮಂಡ್ಯ)–3; ಟ್ರಿಪಲ್‌ ಜಂಪ್‌: ಜಫರ್ ಖಾನ್ (ಬೆಳಗಾವಿ. ಅಂತರ; 14.98 ಮೀಟರ್‌)–1, ಯಶಸ್‌ ಗೌಡ ( ಮಂಡ್ಯ)–2, ಎಸ್. ಪುನೀತ್‌ ( ಕೊಡಗು)–3.

ಶಾಟ್‌ಪಟ್: ಮೊಹಮ್ಮದ್‌ ಸಕ್ಲೇನ್‌ ಅಹಮ್ಮದ್ (ಮೈಸೂರು. ದೂರ: 16.72 ಮೀಟರ್‌)–1, ಪ್ರಜ್ವಲ್ ಶೆಟ್ಟಿ (ಬೆಂಗಳೂರು)–2, ಕಾರ್ತೀಕ್‌ (ಬಳ್ಳಾರಿ)–3; ಡಿಸ್ಕಸ್ ಥ್ರೋ: ಮೊಹಮ್ಮದ್‌ ಸಕ್ಲೇನ್‌ ಅಹಮ್ಮದ್ (ಮೈಸೂರು: ದೂರ: 50.52 ಮೀಟರ್‌), ಮೋಹಿತ್‌ ರಾಜ್‌ (ಮೈಸೂರು)–2, ಪ್ರೀತಂ ರಜಪೂತ್ (ವಿಜಯಪುರ)–3. 110 ಮೀ ಹರ್ಡಲ್ಸ್‌: ರಾಥೋಡ್‌ ಲೋಕೇಶ್ ದಾಮು (ಬೆಂಗಳೂರು: ಕಾಲ; 15.55 ಸೆಕೆಂಡ್‌)–1, ತೇಜಲ್‌ (ದಕ್ಷಿಣ ಕನ್ನಡ)–2, ಸೃಜನ್ ಗೌಡ (ಮಂಡ್ಯ)–3. 4X400 ರಿಲೇ : ಬೆಂಗಳೂರು–1, ಮೈಸೂರು–2, ಬೆಂಗಳೂರು ಗ್ರಾಮಾಂತರ–3.

ವೇಟ್‌ಲಿಫ್ಟಿಂಗ್:
67 ಕೆ.ಜಿ. ವಿಭಾಗ: ಸುಬ್ರಹ್ಮಣ್ಯ (ದಕ್ಷಿಣ ಕನ್ನಡ)–1, ತಿಪ್ಪಣ್ಣ (ದಕ್ಷಿಣ ಕನ್ನಡ)–2, ಯೋಗೇಶ್‌ ನಾಯಕ ( ಬೆಂಗಳೂರು); 73 ಕೆ.ಜಿ. ವಿಭಾಗ: ಶಿವಾನಂದ (ದಕ್ಷಿಣ ಕನ್ನಡ)–1, ಶರತ್‌ (ದಕ್ಷಿಣ ಕನ್ನಡ)–2, ವಜ್ರದತ್‌ ಜಾಧವ್‌ (ದಾವಣಗೆರೆ)–3; 81 ಕೆ.ಜಿ. ವಿಭಾಗ: ಪ್ರತೀಕ್ (ದಕ್ಷಿಣ ಕನ್ನಡ)–1, ಪ್ರಥಮ್‌ ಬಂಗೇರ (ದಕ್ಷಿಣ ಕನ್ನಡ)–2, ಕೃಷ್ಣ (ದಾವಣಗೆರೆ)–3. 89 ಕೆ.ಜಿ. ವಿಭಾಗ: ಜೇಮ್ಸ್ ಕ್ಯಾರಿ (ದಕ್ಷಿಣ ಕನ್ನಡ)–1, ತಿಲಕ್‌ (ಬೆಂಗಳೂರು)–2, ಸಮರ್ಥ್‌ ( ದಕ್ಷಿಣ ಕನ್ನಡ)–3.

ಸೈಕ್ಲಿಂಗ್‌: 80 ಕಿ.ಮೀ. ಮಾಸ್‌ಸ್ಟಾರ್ಟ್‌ ರೇಸ್: ಲಕ್ಷ್ಮೀಶ (ಮೈಸೂರು)–1, ಯಲಗೂರಪ್ಪ ಈರಪ್ಪ ಗದ್ದಿ (ಬಾಗಲಕೋಟೆ)–2, ಬೀರಪ್ಪ ನವಲಿ (ವಿಜಯಪುರ)–3.

ಮಹಿಳೆಯರು:
ಅಥ್ಲೆಟಿಕ್ಸ್‌:
200 ಮೀ ಓಟ: ಜ್ಯೋತಿಕಾ (ಬೆಂಗಳೂರು. ಕಾಲ: 24.82 ಸೆಕೆಂಡ್‌)–1, ಮೇಘಾ ಮುನವಳ್ಳಿಮಠ (ಧಾರವಾಡ)–2, ಎನ್. ಮಮತಾ ( ಮೈಸೂರು)–3; 800 ಮೀ ಓಟ: ಶಿಲ್ಪಾ ಹೊಸಮನಿ ( ಬೆಳಗಾವಿ. ಕಾಲ: 2 ನಿಮಿಷ, 16.13 ಸೆಕೆಂಡ್‌)–1, ಪ್ರತೀಕ್ಷಾ ( ಉಡುಪಿ)–2, ರೇಖಾ ಬಸಪ್ಪ ( ದಕ್ಷಿಣ ಕನ್ನಡ)–3; 3000 ಮೀ ಓಟ: ಪ್ರಣತಿ ( ಬೆಂಗಳೂರು ಗ್ರಾಮೀಣ. ಕಾಲ: 10 ನಿಮಿಷ, 38.20 ಸೆಕೆಂಡ್‌)–1, ಎನ್‌.ಎಲ್. ತೇಜಸ್ವಿ ( ಬೆಂಗಳೂರು)–2, ಎನ್‌.ಎಸ್. ರೂಪಶ್ರೀ ( ದಕ್ಷಿಣ ಕನ್ನಡ)–3; ಲಾಂಗ್‌ ಜಂಪ್‌: ಜಿ. ಪವಿತ್ರಾ ( ಉಡುಪಿ. ದೂರ: 5.64 ಮೀಟರ್)–1, ಪ್ರಿಯಾಂಕಾ ( ದಕ್ಷಿಣ ಕನ್ನಡ)–2, ವರ್ಷಿತಾ ( ಬೆಂಗಳೂರು)–3; ಟ್ರಿಪಲ್ ಜಂಪ್‌: ಜಿ. ಪವಿತ್ರಾ ( ಉಡುಪಿ. ದೂರ: 12.76 ಮೀಟರ್‌)–1, ವರ್ಷಿತಾ ( ಬೆಂಗಳೂರು)–2, ಅಮೂಲ್ಯಾ ( ಶಿವಮೊಗ್ಗ)–3.

ಶಾಟ್‌ಪಟ್‌: ವಿ. ಅಂಬಿಕಾ ( ಮೈಸೂರು. ದೂರ: 14.38 ಮೀಟರ್‌)–1, ನಿವಿತಾ ( ಬೆಂಗಳೂರು)–2, ಬೃಂದಾ ಗೌಡ ( ಮೈಸೂರು)–3: ಡಿಸ್ಕಸ್‌ ಥ್ರೋ: ಎಂ.ಎನ್. ಸುಷ್ಮಾ ( ಮೈಸೂರು. ದೂರ: 42.17 ಮೀಟರ್)–1, ಬಿ. ಸುಷ್ಮಾ ( ದಕ್ಷಿಣ ಕನ್ನಡ)–2, ಕೆ.ವಿ. ಲಿಖಿತಾ ( ಬೆಂಗಳೂರು)–3. 100 ಮೀ ಹರ್ಡಲ್ಸ್‌: ಚಂದ್ರಿಕಾ ( ಉಡುಪಿ. ಕಾಲ: 15.45 ಸೆಕೆಂಡ್)–1, ಚೈತನ್ಯಾ ( ಬೆಂಗಳೂರು ಗ್ರಾಮೀಣ)–2, ವಿ. ಹರ್ಷಿತಾ ( ಬೆಂಗಳೂರು)–3. 4X400 ಮೀ. ರಿಲೇ: ಮೈಸೂರು–1, ಬೆಳಗಾವಿ–2, ಬೆಂಗಳೂರು ಗ್ರಾಮೀಣ–3.

ವೇಟ್‌ಲಿಫ್ಟಿಂಗ್:
71 ಕೆ.ಜಿ. ವಿಭಾಗ: ಸಾನಿಕಾ ( ದಕ್ಷಿಣ ಕನ್ನಡ)– ಮಾನಸಾ ( ದಕ್ಷಿಣ ಕನ್ನಡ)–2, ಔರಾ ಸಿಂಗ್‌ರಾಯ್‌ ( ಬೆಂಗಳೂರು)–3; 76 ಕೆ.ಜಿ. ವಿಭಾಗ: ಯಶಸ್ವಿನಿ ( ಬೆಂಗಳೂರು)–1, ಅನುಷಾ ( ದಕ್ಷಿಣ ಕನ್ನಡ)–2, ಸಂಗೀತಾ ( ದಕ್ಷಿಣ ಕನ್ನಡ).

ಸೈಕ್ಲಿಂಗ್‌: 50 ಕಿ.ಮೀ. ರೇಸ್ : ದೀಪಿಕಾ ಫಡತರೆ ( ವಿಜಯಪುರ)–1, ಅಂಕಿತಾ ರಾಥೋಡ್‌ ( ವಿಜಯಪುರ)–2, ಕೀರ್ತಿ ವಿಠಲನಾಯಕ್ ( ಬಾಗಲಕೋಟೆ)–3.

ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದ ಮೈಸೂರಿನ ಜಿ. ಪವಿತ್ರಾ ಜಿಗಿತದ ಪರಿ– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದ ಮೈಸೂರಿನ ಜಿ. ಪವಿತ್ರಾ ಜಿಗಿತದ ಪರಿ– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT