ಸರಗೂರು: ನವೆಂಬರ್ ತಿಂಗಳಲ್ಲಿ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಅ.15ರಂದು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಕೆಂಡಗಣ್ಣಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ‘ಸಮ್ಮೇಳನ ಅಧ್ಯಕ್ಷರನ್ನು ಆಯ್ಕೆ, ದಿನಾಂಕ ನಿಗದಿ, ಮುಂದಿನ ಸಿದ್ಧತೆ ಕುರಿತು ತೀರ್ಮಾನಿಸಲು ಸಭೆ ಕರೆಯಲಾಗಿದೆ’ ಎಂದರು.

ಸಂಘಟನಾ ಕಾರ್ಯದರ್ಶಿ ಗ್ರಾಮೀಣ ಮಹೇಶ್ ಮಾತನಾಡಿ, ‘ಕನ್ನಡ ಸಮ್ಮೇಳನಕ್ಕೆ ಸರಗೂರು ತಾಲ್ಲೂಕಿನ ಸಾಹಿತಿಯೊಬ್ಬರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಗಿರುವುದರಿಂದ ಸಾರ್ವಜನಿಕರು ಸಾಹಿತ್ಯ ಆಸಕ್ತರು ಸಮ್ಮೇಳನ ಅಧ್ಯಕ್ಷರ ಹೆಸರನ್ನು ಸೂಚಿಸಬೇಕು’ ಎಂದರು.

ಮಹೇಶ್, ಎಸ್.ಆರ್.ನಾಗರಾಮ, ಎಸ್.ಬಿ. ನಾಗರಾಜ್, ಎಸ್.ಪಿ. ಪ್ರಸಾದ್, ಇಟ್ನ ರಾಜಣ್ಣ, ಶಿವಲಿಂಗ ಶೆಟ್ಟಿ ಸೋಮಶೇಖರ್, ರಘುರಾಮ, ಆೌದ ಚಾಲಕ ಚೆಲುವ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.