ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗ ಸ್ಪರ್ಧೆ ಗಿನ್ನೆಸ್‌ ದಾಖಲೆಗೆ ಸೇರಲಿ: ಶಾಸಕ ಟಿ,ಎಸ್‌.ಶ್ರೀವತ್ಸ

ಸ್ಪರ್ಧೆ ಉದ್ಘಾಟಿಸಿ ಶಾಸಕ ಟಿ,ಎಸ್‌.ಶ್ರೀವತ್ಸ ಅಭಿಮತ
Published : 6 ಅಕ್ಟೋಬರ್ 2024, 4:58 IST
Last Updated : 6 ಅಕ್ಟೋಬರ್ 2024, 4:58 IST
ಫಾಲೋ ಮಾಡಿ
Comments

ಮೈಸೂರು: ದಸರಾ ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಯೋಗ ದಸರಾ ಉಪ ಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ಯೋಗಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 2 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.

ಶಾಸಕ ಟಿ.ಎಸ್‌.ಶ್ರೀವತ್ಸ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ‘ಮೈಸೂರಿನಲ್ಲಿ ಯೋಗಕ್ಕೆ ವಿಶೇಷ ಪರಂಪರೆ ಇದೆ. ದಸರಾ ಕಾರ್ಯಕ್ರಮದಲ್ಲೇ ಯೋಗದ ಮೂಲಕ ಗಿನ್ನೆಸ್‌ ದಾಖಲೆ ಮಾಡಿಸುವಂತೆ ಮುಖ್ಯಮಂತ್ರಿಯಲ್ಲಿ ವಿನಂತಿಸಿದ್ದು, ಮುಂದಿನ ದಿನಗಳಲ್ಲಿ ಆ ಕಾರ್ಯವೂ ನಡೆಯಲಿ’ ಎಂದು ಹೇಳಿದರು.

ಯೋಗ ದಸರಾ ಉಪ ಸಮಿತಿ ಅಧ್ಯಕ್ಷ ಎಂ.ಮಹೇಶ್, ಉಪಾಧ್ಯಕ್ಷರಾದ ಜಮೀರ್ ಅಹ್ಮದ್, ಪ್ರಕಾಶ್, ಸಿದ್ದರಾಜು, ಚಿಕ್ಕಸ್ವಾಮಿ, ಉಪ ವಿಶೇಷಾಧಿಕಾರಿ ರಮ್ಯಾ, ಕಾರ್ಯದರ್ಶಿ ಡಾ.ಪುಷ್ಪಾ ಇದ್ದರು‌.

ಸ್ಪರ್ಧೆ ವಿಜೇತರು: ಬಾಲಕರು: 8ರಿಂದ 10 ವರ್ಷ: ಕಮಲೇಶ್‌ ಕೆ–1, ರುಚಿತ್‌ ಎಂ –2, ಉಜ್ವಲ್‌ ಪಿ–3. 10ರಿಂದ 12 ವರ್ಷ: ಕೆ.ಎಚ್‌.ಪ್ರಕೃತಿ ರಾಮ್‌–1, ಹೃತಿಕ್‌–2, ವಿವಾನ್‌ ಕಾರ್ತಿಕ್‌ ಕುಮಾರ್‌– 3. 12ರಿಂದ 14 ವರ್ಷ: ಯಶ್ವಿತ್‌ –1, ಪಿ.ಎಸ್‌.ಶಶಾಂಕ್‌–2, ಜೀವನ್‌ ಸಿ–3. 14ರಿಂದ 18 ವರ್ಷ: ಕವೀಶ್‌–1, ಮೋಹಿತ್‌–2, ಚೇತನ್‌ ಕುಲಕರ್ಣಿ–3.

ಪುರುಷರು: 21ರಿಂದ 25 ವರ್ಷ: ಎಂ.ಸಂದೀಪ್‌–1, ಬಿ.ಎಚ್‌.ಮಂಜುನಾಥ್‌–2, ಪರಶು–3. 25ರಿಂದ 35 ವರ್ಷ: ರಕ್ಷಿತ್ ಕುಮಾರ್‌–1, ಎಂ.ಎನ್‌.ಸುನೀಲ್‌–2, ಆರ್‌.ಪಿ.ಭರತ್‌ ಕುಮಾರ್‌–3, 35ರಿಂದ 45 ವರ್ಷ: ದತ್ತ ಸಾಹೇಬ್‌–1, ಫರಾನ್‌ ಖಾನ್‌–2, ವಿನೋದಾ ರಾಜ್‌–3. 45ರಿಂದ 55 ವರ್ಷ: ಕೆ.ವಿನಾಯಕ–1, ಎಸ್‌.ಶಿವಶಂಕರ್‌–2, ಬಾಪು ನಚಿಕೇತ–3. 55ರಿಂದ 65 ವರ್ಷ: ಡಿ.ನಾಗರಾಜ್‌–1, ಎಚ್‌.ಸಿ.ಶಂಕರಪ್ಪ–2, ಎಸ್‌.ಮಧುಸೂದನ್‌ ರಾವ್‌–3. 65ಕ್ಕಿಂತ ಹೆಚ್ಚಿನ ವಯೋಮಾನ: ಬಿ.ಆರ್‌.ಗೋಪಾಲ ರಾಜ್‌–1, ರಾಮಸ್ವಾಮಿ–2, ವಿಜಯ್‌ ರಘುನಾಥ್‌–3.

ಬಾಲಕಿಯರು: 8ರಿಂದ 10 ವರ್ಷ: ಬಿ.ಎಂ.ಅಕ್ಷಯಾ–1, ಕೆ.ಪ್ರಜ್ಞಾ–2, ಡಿಂಪೂ–3. 10ರಿಂದ 12 ವರ್ಷ: ಹಿತೈಷಿನಿ–1, ಅನ್ವಿತಾ ಶೆಟ್ಟಿ–2, ಆರ್‌.ವಿ.ಲಿಖಿತಾ–3. 12ರಿಂದ 14 ವರ್ಷ: ಹರ್ಷಿತಾ–1, ವೇದಿಕಾ ಮಾನ್ಯಶ್ರೀರಾಂ–2, ಕೆ.ಯಶಿಕಾ–3. 14ರಿಂದ 18 ವರ್ಷ: ಬಿ.ಆರ್‌.ನಂದಿತಾ–1, ಕೆ.ಪೂರ್ವಿಕಾ–2, ಸುಭಿ ಕುಮಾರಿ ಪಾಂಡೆ–3. 18ರಿಂದ 21 ವರ್ಷ: ಮೋನಿಕಾ–1, ಸೃಜನ್‌ ರಾವ್‌–2, ಶಿವಕುಮಾರಿ ಪ್ರಿಯಾ–3. 21ರಿಂದ 25 ವರ್ಷ: ಸುಚಿತ್ರಾ–1, ಆರ್‌.ರಕ್ಷಿತಾ–2, ಎ.ಎಸ್‌.ರಕ್ಷಿತಾ–3.

ಮಹಿಳೆಯರು: 25ರಿಂದ 35 ವರ್ಷ: ಚರಣ್ಯ ಎಸ್‌–1, ಆರ್‌.ಸಿ.ಪವಿತ್ರಾ–2, ಬಿ.ಅರ್ಚನಾ–3. 35ರಿಂದ 45 ವರ್ಷ: ಆರ್‌.ರಾಮ ಕೆದಿಲಾಯ–1, ಗೀತಾಂಜಲಿ–2, ಸುನಿತಾ–3. 45ರಿಂದ 55 ವರ್ಷ: ‌ಪದ್ಮಕುಮಾರಿ–1, ನದಿಯಾ–2, ರೂಪಾ–3. 55ರಿಂದ 65 ವರ್ಷ: ಡಿ.ನಾಗಲಕ್ಷ್ಮಿ–1, ಎಂ.ಎನ್‌.ಪುಷ್ಪಲತಾ–2, ಎಚ್‌.ರತ್ನಾವತಿ–3. 65ಕ್ಕಿಂತ ಹೆಚ್ಚಿನ ವಯೋಮಾನ: ಟಿ.ಜಿ.ಸರೋಜಾ–1, ಎಂ.ಉಮಾ ಜೋಶಿ–2, ಸಿ.ಎಂ.ಪಾರ್ವತಿ–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT