ಮೈಸೂರು: ‘ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಶರಣರನ್ನು ಬೆಂಬಲಿಸಿ ಮಾತನಾಡಿದ ಆದಿ ಜಾಂಬವ ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಪೀಠತ್ಯಾಗ ಮಾಡಬೇಕು’ ಎಂದು ಸಂಘದ ಪ್ರಮುಖರು ಶುಕ್ರವಾರ ಇಲ್ಲಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಆದಿ ಜಾಂಬವ ಸಂಘದ ಅಧ್ಯಕ್ಷ ಎಡತೊರೆ ಎಂ. ನಿಂಗರಾಜ್, ‘ಮಾದಾರ ಚನ್ನಯ್ಯ ಸ್ವಾಮೀಜಿ ಸ್ವತಃ ಪೀಠ ತೊರೆಯಬೇಕು. ಇಲ್ಲವಾದರೆ ಹೋರಾಟ ನಡೆಸಿ ಹೊರ ಹೋಗುವಂತೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಮಾದಾರ ಚನ್ನಯ್ಯ ಸ್ವಾಮೀಜಿಗೆ ದೀಕ್ಷೆ ನೀಡಿದ್ದೇ ಮುರುಘಾ ಶರಣರು. ಕೃತಜ್ಞತೆ ಅವರಿಗಿರಬಹುದು. ಆದರೆ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಖಂಡಿಸಿ, ಸಂತ್ರಸ್ತೆಯರ ಮನಸ್ಥೈರ್ಯ ಹೆಚ್ಚಿಸಬೇಕಾಗಿರುವ ಸ್ವಾಮೀಜಿಯ ವರ್ತನೆ ಖಂಡನಾರ್ಹ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.