ಮೈಸೂರು: ‘ನಗರದ ರಾಜ್‌ಕುಮಾರ್ ಕಲಾ ಸೇವಾ ಟ್ರಸ್ಟ್‌ನಿಂದ ನಟ ರಾಜ್‌ಕುಮಾರ್ ಅವರ 96ನೇ ಜಯಂತಿ ಪ್ರಯುಕ್ತ ಇಲ್ಲಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಏ.23ರಿಂದ 30ರವರೆಗೆ ಪ್ರತಿ ದಿನ ಸಂಜೆ 5ರಿಂದ ರಾತ್ರಿ 9.30ರವರೆಗೆ ಚಲನಚಿತ್ರ ಗೀತೆ ಗಾಯನದ ‘ನೆನಪಿನೋತ್ಸವ’ ಆಯೋಜಿಸಲಾಗಿದೆ’ ಎಂದು ಟ್ರಸ್ಟ್ ಸ್ಥಾಪಕ ಬಿ.ಎಸ್.ಜಯರಾಮರಾಜು ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಳು ದಿನಗಳ ಉತ್ಸವದಲ್ಲಿ 300 ಗೀತೆಗಳನ್ನು ವಿವಿಧ ಗಾಯಕರು ಹಾಡುವರು. ಏ.23ರಂದು ಪಿ.ಬಿ. ಶ್ರೀನಿವಾಸ್ ಅವರು ರಾಜ್‌ಕುಮಾರ್ ಚಿತ್ರಗಳಿಗೆ ಹಾಡಿದ ಹಾಡುಗಳನ್ನು ಪ್ರಸ್ತುತಪಡಿಸಲಾಗುತ್ತದೆ. 24ರಂದು ಜನ್ಮದಿನದ ಪ್ರಯುಕ್ತ 10 ಮಂದಿ ಹಿರಿಯ ಕಲಾವಿದರಿಗೆ ಸನ್ಮಾನ ಆಯೋಜಿಸಲಾಗಿದೆ. ಪ್ರತಿದಿನವೂ ಗಾಯನಕ್ಕೂ ಮುನ್ನ ಪ್ರಮುಖ ಅತಿಥಿಗಳೊಂದಿಗೆ 15 ನಿಮಿಷಗಳ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದರು.

ಟ್ರಸ್ಟ್ ಗಾಯಕರಾದ ಸುಧೀಂದ್ರ, ಬಾಲುಪ್ರಕಾಶ, ಸರ್ವಮಂಗಳಾ, ಲತಾ ಬಾಲಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.